ಧಾರವಾಡ : ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಒಬ್ಬ ಒಳ್ಳೆಯ ವ್ತಕ್ತಿಯನ್ನು ಸೂಚಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎಸ್.ಆರ್.ಹಿರೇಮಠ ಆಗ್ರಹ ಮಾಡಿದ್ದಾರೆ. ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ರಾಜೀನಾಮೆಗೆ ಆಗ್ರಹ ಮಾಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಕಷ್ಟದಲ್ಲಿ ಬಿದ್ದಿದೆ. ಸಿಎಂ ಸಿದ್ದರಾಮಯ್ಯ ಹಾಗು ಕ್ಯಾಬಿನೆಟ್ ಸಚಿವರು, ಶಾಸಕರು, ಸಂಸದರ ಮೇಲೆ ವಿಶ್ವಾಸ ಇಟ್ಟು ಜನರು ಅಧಿಕಾರದ ಸ್ಥಾನ ಮಾನ ನೀಡಿರುತ್ತಾರೆ. ಆದರೆ ಇವರುಗಳು ಬಹಳ ಜವಾಬ್ದಾರಿಯಿಂದ ಅಧಿಕಾರ ಬಳಕೆ ಮಾಡಬೇಕು ಎಂದಿದ್ದಾರೆ.
ನಾನು ಕಾನೂನಾತ್ಮಕವಾಗಿ ಸರಿ ಇದ್ದೀನೋ ಇಲ್ವೋ ಅನ್ನುವುದು ಒಂದು ವಿಚಾರ. ಆದರೆ ನೈತಿಕತೆ ಇದ್ದರೆ ಮಾತ್ರ ಸಾರ್ವಜನಿಕ ಜೀವನದಲ್ಲಿ ಇರಲು ಇವರು ಯೋಗ್ಯರು. ಸಂವಿಧಾನಾತ್ಮಕ ಸ್ಥಾನ ಇದೆ, ಸಿಎಂ ಸ್ಥಾನಕ್ಕೆ ಬಹಳ ಮಹತ್ವ ಇದೆ. ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ, ಇದೆ ಅಂತ ನನಗೆ ಅನಿಸುತ್ತಿದೆ. ಕೂಡಲೇ ರಾಜೀನಾಮೆ ನೀಡ್ಬೇಕು ಎಂದಿದ್ದಾರೆ.
ಸಿದ್ದರಾಮಯ್ಯ ಸುಮ್ಮನೆ ಸೈಟ್‌ಗಳನ್ನು ವಾಪಸ್ ನೀಡಬೇಕು. ಎಲ್ಲರಿಗೂ ನ್ಯಾಯಬದ್ಧವಾಗಿ ಪರಿಹಾರ ನೀಡಬೇಕು. ಆದರೆ ₹50 ಕೋಟಿ ಬೆಲೆಬಾಳುವ ಸೈಟ್ ಪಡೆದಿದ್ದಾರೆ. ಜಿಂದಾಲ್ ಸಂಸ್ಥೆ ಅವರಿಗೆ 3,667 ಎಕರೆ ಭೂಮಿಯನ್ನು ಯಾವ ದರದಲ್ಲಿ ಕೊಡುತ್ತಿದ್ದಾರೆ..? ತಮ್ಮ ವ್ಯಕ್ತಿಗತ ಸಂಬಂಧದಲ್ಲಿ ಯಾವ ರೀತಿ ನೋಡುತ್ತಾರೆ. ಬಡವರು ರೈತರನ್ನು ಯಾವ ರೀತಿ ನೋಡುತ್ತಾರೆ ಎಂಬುದು ಕಾಣುತ್ತದೆ ಎಂದಿದ್ದಾರೆ.
ಮೊದಲೆ ಸಿಎಂ ಸಿದ್ದರಾಮಯ್ಯ ಅವರು ಸೈಟ್ ವಾಪಸ್ ಕೊಟ್ಟಿದ್ದರೆ ಬಹಳ ಒಳ್ಳೆಯದಾಗುತ್ತಿತ್ತು. ಸಿಎಂ ರಾಜೀನಾಮೆಗೆ ವಿರೋಧ ಪಕ್ಷ ಆಗ್ರಹ ಮಾಡುತ್ತಿರುವ ವಿಚಾರವಾಗಿ ಮಾತನಾಡಿ, ಇಂದು ರಾಜೀನಾಮೆ ಕೇಳುವವರು ಯಾರು..? ಬಿಜೆಪಿ ಮತ್ತು ಜೆಡಿಎಸ್‌ನವರು ರಾಜೀನಾಮೆ ಕೇಳುತ್ತಿದ್ದಾರೆ. ಅವರು ಮಾಡಿದ ಅವ್ಯವಹಾರಗಳು, ಕುಮಾರಸ್ವಾಮಿ ಅವರು ಎಸ್‌ಸಿ, ಎಸ್‌ಟಿ, ಬಡವರ, ಗೋಮಾಳ ಜಮೀನು ಸೇರಿ 54 ಎಕರೆ ಪಡೆದುಕೊಂಡಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ರಾಜ್ಯದ ಜನತೆಯ ಕ್ಷಮೆ ಕೇಳಿ ಜಮೀನು ವಾಪಸ್ ಕೊಡಬೇಕು ಎಂದಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಬೇರೆಯವರಿಗೆ ಇಲ್ಲ. ದುರ್ದೈವ ಸಿದ್ದರಾಮಯ್ಯ ಅವರಿಗೆ ಈ ಪರಿಸ್ಥಿತಿ ಬರಬಾರದಿತ್ತು. ಸದ್ಯ ಭ್ರಷ್ಟಾಚಾರ ಪ್ರತಿರೂಪ ಇರುವ ಡಿ.ಕೆ ಶಿವಕುಮಾರ್ ಉಪಮುಖ್ಯಮಂತ್ರಿ ಆಗಿದ್ದಾರೆ. ಸಿಎಂ ಸ್ಥಾನಕ್ಕೆ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಈಗ ಪ್ರಕರಣ ಹದ್ದು ಮೀರಿ ಹೋಗಿರೊ ಕಾರಣ ರಾಜೀನಾಮೆ ನೀಡಬೇಕು. ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ.