ಬೀದರ್ :ವಕ್ಷ ವಿಷಯದಲ್ಲಿ ರೈತರಿಗೆ ನೋಟಿಸ್ ನೀಡಬಾರದು, ನೋಟಿಸ್ ಹಿಂಪಡೆಯಲಾಗುವುದು. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲಾ ಎಂದೆಲ್ಲಾ ಹೇಳಿಕೆ ನೀಡಿ, ಕಾಂಗ್ರೇಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆ ಗಿಮಿಕ್ ಮಾಡಲು ಹೊರಟಿದ್ದಾರೆ.ಈ ಸರ್ಕಾರಕ್ಕೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿಯಿದ್ದರೆ, ಬರುವ ವಾರದೋಳಗೆ ಭೂಮಿ ಕಳೆದುಕೊಂಡ ಎಲ್ಲಾ ರೈತರ ಪಹಣಿಗಳಲ್ಲಿ ಕಾಲಂ ಸಂಖ್ಯೆ 11ರಲ್ಲಿ ಬರುತ್ತಿರುವ ವಕ್ಷ ಮಂಡಳಿ ಹೆಸರಿನ ಬದಲಾಗಿ ರೈತರ ಹೆಸರುಗಳು ಬರುವ ಹಾಗೆ ಮಾಡಿಕೊಡಲಿ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ.
ಉಪಚುನಾವಣೆಗಳಲ್ಲಿ ಎಲ್ಲಿ ಸೋತು ಬಿಡುತ್ತೆವೋ ಎನ್ನುವ ಭಯದಿಂದ, ಬಿಸೊ ದೊಣ್ಣೆಯಿಂದ.
ತಪ್ಪಿಸಿಕೊಂಡರೆ ಸಾಕು ಎಂದು ಈ ಹೊಸ ನಾಟಕ ಶುರು ಮಾಡಿದ್ದಾರೆ.ಇವರ ದುರಾಡಳಿತ ಮತ್ತು ಒಂದು ಕೋಮಿಗೆ ನೀಡುತ್ತಿರುವ ಬೆಂಬಲ ನೋಡಿ ರಾಜ್ಯದ ಜನ ಈ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ನೀಡುತ್ತಿರುವ ಬೆಂಬಲ ನೋಡಿ, ಮತ್ತು ನಮ್ಮ ಪಕ್ಷದಿಂದ ನವೆಂಬರ್ 4 ರಂದು ನಡೆಯಲಿರುವ ಪ್ರತಿಭಟನೆಗೆ ಹೆದರಿ, ಗಾಬರಿ ಬಿದ್ದು ನೋಟಿಸ್ ಹಿಂಪಡೆಯುವ ನಿರ್ಧಾರದ ನಾಟಕ ಪ್ರಾರಂಭಿಸಿದ್ದಾರೆ ಎಂದಿದ್ದಾರೆ.
ಕಾಂಗ್ರೇಸ್ ಎಂದರೆ ಕೇವಲ ಒಂದು ಕೋಮಿನ ಪಕ್ಷ ಎಂದು ರಾಜ್ಯದಲ್ಲಿರುವ ಎಲ್ಲಾ ಜಾತಿಯವರ ಅರಿವಿಗೆ ಬಂದಿದೆ. ಇವರು ಅಧಿಕಾರದಲ್ಲಿರುವವರೆಗೂ ಇವರು ಕೇವಲ ಒಂದು ಕೋಮಿನವರಿಗೆ ಮಾತ್ರ ಒಳ್ಳೆದು ಮಾಡುತ್ತಾರೆ.ಉಳಿದವರಿಗೆ ಕಾಲು ಕಸದ ತರಹ ನೋಡುತ್ತಾರೆ ಎಂಬುದು ಇವರ ಆಡಳಿತದಿಂದ ಜನರಿಗೆ ಗೊತ್ತಾಗಿದೆ.ಈ ಉಪಚುನಾವಣೆಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಇವತ್ತು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದಿದ್ದಾರೆ.