ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ(karntaka assembly election 2023) ನಡೆಯಲಿದೆ. ಈ ಮಧ್ಯೆ ರಾಜಕೀಯ ನಾಯಕರು ವಾಕ್ಸಮರ ಮುಂದುವರೆಸಿದ್ದಾರೆ. ಇನ್ನೂ ಮೈಸೂರಿನಲ್ಲಿ ಮಾತ್ನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ʻನಾನು ಭಾರತೀಯ ಜನತಾ ಪಕ್ಷದ ಶಿಸ್ತಿನ ಸಿಪಾಯಿ.ಪಕ್ಷ ನನಗೆ ಟಿಕೆಟ್ ನೀಡದಿದ್ದರೂ ಪಕ್ಷ ವಹಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ನಾನು ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ಧನಾಗಿದ್ಧೇನೆ.ಟಿಕೆಟ್ ಸಿಗಲಿಲ್ಲವೆಂದು ಪಕ್ಷ ತೊರೆದವರು ಮುಂದಿನ ದಿನಗಳಲ್ಲಿ ಅನುಭವಿಸಲಿದ್ಧಾರೆ ಅಂತ ಕೆ ಎಸ್ ಈಶ್ವರಪ್ಪ ಮೈಸೂರಿನಲ್ಲಿ ಹೇಳಿಕೆ ನೀಡಿದ್ರು. ಕರ್ನಾಟಕ ಮಾತ್ರವಲ್ಲದೇ ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದಬ ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿಕೆ ವಿಚಾರವಾಗಿ ಮಾತ್ನಾಡಿದ ಕೆ.ಎಸ್.ಈಶ್ವರಪ್ಪ, ʻನರೇಂದ್ರ ಮೋದಿಯವರ ನಾಯಕತ್ವವನ್ನು ಇಡೀ ದೇಶವೇ ಒಪ್ಪಿಕೊಂಡಿದೆ. ಧರ್ಮವಿರೋಧಿಗಳು ಹೆಚ್ಚಾಗಿರುವ ತಮಿಳುನಾಡಿನಲ್ಲೇ ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತಷ್ಟು ಬಲವಾಗಲಿದೆ. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದೆʼ ಅಂತ ಹೇಳಿದ್ರು.
ಈಶ್ವರಪ್ಪನವರಿಗೆ ಟಿಕೆಟ್ ನೀಡದೇ ಒಳ್ಳೆಯ ಕೆಲಸ ಮಾಡಿದ್ದಾರೆ.ಈಶ್ವರಪ್ಪ ಬಾಯಿಗೆ ಬಂದಂತೆ ಮಾತನಾಡುತ್ತಿದ್ಧ, ಅವನಿಗೆ ಸರಿಯಾಗಿ ಮಾಡಿದ್ದಾರೆ ಎಂದಿದ್ಧ ಸಿದ್ಧರಾಮಯ್ಯ ಹೇಳಿಕೆಗೆ, ʻನಾನು ಒಂದು ಮಾತು ತಪ್ಪು ಮಾತಾಡಿದ್ದರೆ ತೋರಿಸಲಿ. ನಾನ್ಯಾವಾಗ ಬಾಯಿಗೆ ಬಂದಂತೆ ಮಾತಾಡಿದ್ಧೀನಿ ತೋರಿಸಲಿ. ಸಿದ್ಧರಾಮಯ್ಯ ಕುರುಬರೆಲ್ಲ ನನ್ನೊಂದಿಗೆ ಬನ್ನಿ ಅಂತಾರೆ. ಡಿ.ಕೆ.ಶಿವಕುಮಾರ್ ಒಕ್ಕಲಿಗರೆಲ್ಲ ನನ್ನ ಹಿಂದೆ ಬನ್ನಿ ಎನ್ನುತ್ತಾರೆ. ಸಿದ್ಧರಾಮಯ್ಯ ಜಾತಿವಾದಿ. ನಾನು ರಾಷ್ಟ್ರೀಯ ವಾದಿ. ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯಾದಾಗ ಮಾತನಾಡುವುದು ತಪ್ಪಾ? ಬಾಯಿಗೆ ಬಂದಂತೆ ಮಾತನಾಡುವುದು ಸಿದ್ಧರಾಮಯ್ಯ. ಕಳೆದ ಚುನಾವಣೆಯಲ್ಲೇ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ಧರು ಸಿದ್ಧರಾಮಯ್ಯ. ಚಾಮುಂಡೇಶ್ವರಿಯಲ್ಲಿ ಸೋತು ಈಗ ಆ ಕಡೆ ಮುಖ ಹಾಕಲು ಹೆದರುತ್ತಿದ್ಧಾರೆ. ಸಿದ್ಧರಾಮಯ್ಯ ಈ ಬಾರಿ ವರುಣದಲ್ಲೂ ಇದು ನನ್ನ ಕೊನೆಯ ಚುನಾವಣೆ ಎನ್ನುತ್ತಿದ್ಧಾರೆ. ಅವರು ಮುಂದಿನ ಬಾರಿಯೂ ಚುನಾವಣೆಗೆ ನಿಲ್ಲುತ್ತಾರೆ. ಸಿದ್ಧರಾಮಯ್ಯ ಈ ಬಾರಿ ವರುಣದಲ್ಲಿ ಗೆದ್ಧು ತೋರಿಸಲಿʼ ಅಂತ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯಗೆ ಸವಾಲು ಹಾಕಿದ್ರು.