2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ(karnataka assembly election 2023) ಕಾಂಗ್ರೆಸ್ ಪಕ್ಷ ಬಹುಮತ ಪಡೆದು, ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಇನ್ನು ಸಿಎಂ ಯಾರಾಗ್ತಾರೆಂಬ ಪ್ರಶ್ನೆ, ರಾಜ್ಯದ ಜನತೆಯಲ್ಲಿದೆ. ಸಿದ್ದರಾಮಯ್ಯ(siddaramaiah) ಹಾಗೂ ಡಿಕೆ ಶಿವಕುಮಾರ್(DK shivakumar) ಇವರಿಬ್ಬರಲ್ಲಿ ಒಬ್ಬರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿದೆ. ಈ ಮಧ್ಯೆ ಸ್ಯಾಂಡಲ್‌ವುಡ್ ನಟ ಚೇತನ್ ಅಹಿಂಸಾ,(chetan ahimsa) ಸಿದ್ದರಾಮಯ್ಯ ಹಾಗೂ ಡಿ.ಕೆಶಿವಕುಮಾರ್ ಈ ಇಬ್ಬರಲ್ಲಿ ಯಾರು ಸಿಎಂ ಆದ್ರೆ ಉತ್ತಮ ಅಂತ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ಸಿದ್ದರಾಮಯ್ಯ(siddaramaiah) ಮತ್ತು ಡಿಕೆ ಶಿವಕುಮಾರ್(DK shivakumar) ನಡುವೆ ಕರ್ನಾಟಕದ(karnataka ಜನತೆಗೆ ಉತ್ತಮ ಸಿಎಂ ಯಾರು? ನಮ್ಮ ಜನರ ಜೀವನವನ್ನು ಸುಧಾರಿಸುವ ದೃಷ್ಟಿಯಿಂದ ಸಿದ್ದರಾಮಯ್ಯ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಅವನತಿ ವಿಚಾರದಲ್ಲಿ ಡಿಕೆ ಶಿವಕುಮಾರ್. ಆದ್ದರಿಂದ, ಅಲ್ಪಾವಧಿಗೆ ಸಿದ್ದರಾಮಯ್ಯ ಕರ್ನಾಟಕಕ್ಕೆ ಉತ್ತಮ. ದೀರ್ಘಾವಧಿಗೆ ಡಿಕೆ ಶಿವಕುಮಾರ್(DK shivakumar) ಕರ್ನಾಟಕಕ್ಕೆ ಉತ್ತಮ’ ಅಂತ ನಟ ಚೇತನ್ ಟ್ವೀಟ್(tweet ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
