
ಆರು ತಿಂಗಳ ವಯಸ್ಸಿನಲ್ಲಿ ಯಾವುದೇ ನೆರವು, ಬಾಹ್ಯ ಬೆಂಬಲವಿಲ್ಲದೇ 44 ನಿಮಿಷ 8 ಸೆಕೆಂಡುಗಳ ಕಾಲ ಕುಳಿತುಕೊಂಡು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ (World Wide Book of Records) ದಾಖಲೆ ಮಾಡಿ ರಾಜ್ಯದ ಗಮನ ಸೆಳೆದ ಬಳ್ಳಾರಿ ಜಿಲ್ಲೆ ಕಂಪ್ಲಿಯ ನಿವಾಸಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ (Mohan Kumar Danappa) ಮತ್ತು ಸೌಮ್ಯಶ್ರೀ ಮೋಹನ್ ಕುಮಾರ್ (Sowmya Shree Mohan Kumar) ರವರ ದ್ವಿತೀಯ ಸುಪುತ್ರಿ ದ್ವಿತಾ ಮೋಹನ್ (Dwitha Mohan) ಅವರಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು (CM Siddaramaiah) ಅಭಿನಂದಿಸಿದ್ದಾರೆ.

ಮುಖ್ಯಮಂತ್ರಿಗಳ ಅಭಿನಂದನಾ ಪತ್ರದಲ್ಲಿ
ಬಳ್ಳಾರಿ ಜಿಲ್ಲೆ, ಕಂಪ್ಲಿ ನಗರ ನಿವಾಸಿ ಮೋಹನ್ ಕುಮಾರ್ ದಾನಪ್ಪ ಮತ್ತು ಶ್ರೀಮತಿ ಸೌಮ್ಯಶ್ರೀ ಮೋಹನ್ ಕುಮಾರ್ ರವರ ದ್ವಿತೀಯ ಪುತ್ರಿ (6 ತಿಂಗಳ) ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಮಾಡಿದ ಬೇಬಿ।। ದ್ವಿತಾ ಮೋಹನ್ ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಸಂತಸದ ಸಂಗತಿ.
ಕೇವಲ 6 ತಿಂಗಳ ವಯಸ್ಸಿನಲ್ಲಿ ಯಾವುದೇ ನೆರವು, ಬಾಹ್ಯ ಬೆಂಬಲವಿಲ್ಲದೆ 44 ನಿಮಿಷ 8 ಸೆಕೆಂಡ್‌ಗಳ ಕಾಲ ಕುಳಿತುಕೊಂಡು ಗಮನಾರ್ಹ ಸಮತೋಲನ ಮತ್ತು ಶಕ್ತಿಯನ್ನು ಪ್ರದರ್ಶಿಸಿರುವುದು ಅಸಾಧಾರಣ. ಬೇಬಿ ದ್ವಿತಾಳ ದೈಹಿಕ ಸಮನ್ವಯ ಮತ್ತು ಆರಂಭಿಕ ಬೆಳವಣಿಗೆಯ ಮೈಲಿಗಲ್ಲು ಸಾಧನೆಗಳನ್ನು ಇದು ಎತ್ತಿ ತೋರಿಸುತ್ತದೆ.

ಭವಿಷ್ಯದಲ್ಲಿ ಬೇಬಿ॥ ದ್ವಿತಾ ಮೋಹನ್ ಇನ್ನಷ್ಟು ಸಾಧನೆ ಮಾಡುವ ಮೂಲಕ ರಾಜ್ಯದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಲೆಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಭಿನಂದಿಸಿ ಹಾರೈಸಿದ್ದಾರೆ.

ದ್ವಿತಾ ಮೋಹನ್ ರ ಸಾಧನೆ ರಾಜ್ಯಕ್ಕೆ ಕೀರ್ತಿ ತಂದಿದ್ದು, ಮಗಳ ಸಾಧನೆಯನ್ನು ಪರಿಗಣಿಸಿ ಮುಖ್ಯಮಂತ್ರಿಗಳು ಅಭಿನಂದಿಸಿರುವುದು ಕುಟುಂಬಕ್ಕೆ ಸಂತಸ ತಂದಿದೆ ಎಂದು ತಂದೆ ಮೋಹನ್ ಕುಮಾರ್ ದಾನಪ್ಪ, ತಾಯಿ ಸೌಮ್ಯಶ್ರೀ ಮೋಹನ್ ಕುಮಾರ್, ಅಜ್ಜ ಎ.ಸಿ.ದಾನಪ್ಪ ,ಅಜ್ಜಿ ಎ.ಹುಲಿಗೆಮ್ಮನವರು ಸಂತಸ ವ್ಯಕ್ತಪಡಿಸಿದರು










