ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರ ನಿವಾಸದಲ್ಲಿ ಇಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಉಪಹಾರ ಕೂಟ ಏರ್ಪಡಿಸಲಾಗಿತ್ತು. ರಾಜ್ಯದ ಸಿಎಂಗೆ ಡಿಸಿಎಂ ಮನೆಯಲ್ಲಿ ಬೆಳ್ಳಂಬೆಳಗ್ಗೆಯೇ ನಾಟಿ ಕೋಳಿ ಜೊತೆಗೆ ಇಡ್ಲಿ ಉಣಬಡಿಸಿ ಅತಿಥಿ ಸತ್ಕಾರ ಮಾಡಲಾಯಿತು. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಎದ್ದಿದ್ದ ಅಧಿಕಾರ ಹಸ್ತಾಂತರ ಶೀತಲ ಸಮರಕ್ಕೆ ಅಂತ್ಯ ಹಾಡುವ ಪ್ರಯತ್ನ ಮಾಡಿದ್ದಾರೆ.

ಇಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ವೇಳೆ ರಾಜಕೀಯ ವಿಷಯದಷ್ಟೇ ಸಿಎಂ ಹಾಗೂ ಡಿಸಿಎಂ ಧರಿಸಿದ್ದ ವಾಚ್ ಎಲ್ಲರ ಗಮನ ಸೆಳೆದಿದೆ. ಇಂದು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಕಾರ್ಟಿಯರ್ (Cartier) ಎನ್ನುವ ಕಂಪನಿಯ ವಾಚ್ ಧರಿಸಿದ್ದು, ಇದರ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ ಎಂದು ವರದಿಯಾಗಿದೆ.

ಈ ಬಗ್ಗೆ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡುವ ಮೂಲಕ ಸಿಎಂ ಹಾಗೂ ಡಿಸಿಎಂ ಧರಿಸಿದ್ದ ವಾಚ್ ಬಗ್ಗೆ ವಿವರಿಸಿದ್ದು, ಈ ಹಿಂದೆ ಸಿದ್ದರಾಮಯ್ಯ ಧರಿಸಿದ್ದ 70 ಲಕ್ಷದ ವಾಚ್ ಬಗ್ಗೆ ಕೂಡ ಉಲ್ಲೇಖಿಸಿದೆ. ʼಸಿಎಂ ಸಿದ್ದರಾಮಯ್ಯನವರೇ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೇ 43 ಲಕ್ಷ ರೂ. ಬೆಲೆ ಬಾಳುವ ಕಾರ್ಟಿಯರ್ ವಾಚ್ ಕಟ್ಟಿದ್ದೀರಿ. ರಾಜ್ಯಕ್ಕೆ ಯಾವ ಮಹತ್ತರ ಉಪಕಾರ ಮಾಡಿದಿರಿ ಎಂದು ನಿಮಗೆ ಈ ಲಕ್ಷ ಬೆಲೆ ಬಾಳುವ ಕಾರ್ಟಿಯರ್ ವಾಚ್ ಉಡುಗೊರೆಯಾಗಿ ಬಂದಿದೆ? ಅಂದು ₹70 ಲಕ್ಷ, ಇಂದು ₹43 ಲಕ್ಷ. ಕೈ ಗಡಿಯಾರ ಬದಲಾಗಿದೆ ಹೊರತು, ಮಜಾವಾದಿ ಮನಸ್ಥಿತಿ ಬದಲಾಗಿಲ್ಲ. ಸಮಾಜವಾದದ ಮುಖವಾಡ ಧರಿಸಿ ಮಜಾವಾದದ ಜೀವನ ನಡೆಸುತ್ತಿರುವ ಸಿದ್ದರಾಮಯ್ಯನವರೇ ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.
Mr. @siddaramaiah , your definition of Socialism seems to come with a very high price tag. While the people of Karnataka struggle with drought and crumbling infrastructure, our “Simple Socialist” CM flaunts a Santos de Cartier.#CongressFailsKarnataka pic.twitter.com/Qog1jt1WSz
— BJP Karnataka (@BJP4Karnataka) December 2, 2025











