ರಾಷ್ಟ್ರ ಧ್ವಜ ಅಥವಾ ಕನ್ನಡ ಧ್ವಜ ಹಾರಿಸ್ತೀವಿ ಅಂತಾ ಅನುಮತಿ ಪಡೆದಿದ್ರು. ಯಾವುದೇ ಧರ್ಮದ ಧ್ವಜವನ್ನ ಆ ಕಂಬದಲ್ಲಿ ಹಾರಿಸಲ್ಲ ಅಂತಾ ಹೇಳಿದ್ರು. ಅದನ್ನ ಉಲ್ಲಂಘಿಸಿ ಭಗವಾ ಧ್ವಜ ಹಾರಿಸಿದ್ದಾರೆ. ಇದು ಅವರೇ ಬರೆದುಕೊಟ್ಟಂತಹ ಮುಚ್ಚಳಿಕೆಗೆ ವಿರುದ್ಧ ಅಲ್ವಾ. ಇದರ ಪರವಾಗಿ ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) ಪ್ರತಿಭಟನೆಗೆ ಹೋಗ್ತಾರೆ ಅಂತಂದ್ರೆ ಪ್ರಚೋದನೆ ಅಲ್ವಾ ಎಂದು ಸಿಎಂ ಸಿದ್ದರಾಮಯ್ಯ (siddaramiah) ಹೇಳಿದ್ದಾರೆ.

ಇದು ಚುನಾವಣಾ ರಾಜಕೀಯ ಲಾಭ (Politics) ಪಡೆಯುವ ಸಲುವಾಗಿ ಮಾಡ್ತಾ ಇರುವಂಥದ್ದು. ಇದು ರಾಜಕೀಯ ಕುತಂತ್ರ. ಇದರಲ್ಲಿ ಸರ್ಕಾರದ ಯಾವುದೇ ವೈಫಲ್ಯ ಇಲ್ಲಾ. ಪೊಲೀಸ್ ನವರಿಗೇ ಹೊಡೆದ್ರೆ ಏನ್ ಮಾಡ್ತಾರೆ. ಲಾಠಿ ಚಾರ್ಜ್ ಬಗ್ಗೆ ನನಗೆ ಇನ್ನೂ ಸರಿಯಾಗಿ ಗೊತ್ತಿಲ್ಲ. ಪೊಲೀಸ್ ನವರಿಗೇ ಹೊಡೆದ್ರು ಅಂತಾ ಮಾಹಿತಿ ಇದೆ. ನಕಲಿ ದಾಖಲಿ ಅನ್ನೋ ಕುಮಾರಸ್ವಾಮಿ ಆರೋಪ ವಿಚಾರ. ಕುಮಾರಸ್ವಾಮಿಗೆ ಸುಳ್ಳು ಹೇಳೋದು ಬಿಟ್ರೆ ಇನ್ನೇನ್ ಗೊತ್ತಿದೆ. ಯಾವುದಾದ್ರೂ ಅವರು ಹೇಳಿದ್ದನ್ನ ಸಾಬೀತು ಮಾಡಿದ್ದಾರಾ. ಆರೋಪ ಮಾಡಬೇಕು ಅಂತಾ ಮಾಡ್ತಾರೆ ಅಷ್ಟೇ. ಕುಮಾರಸ್ವಾಮಿಯೇ ಬಿಜೆಪಿಯ ವಕ್ತಾರರಾಗಿಬಿಟ್ಟಿದ್ದಾರೆ. ಮೈತ್ರಿ ಮಾಡಿಕೊಂಡಿದ್ದೇವೆ ಅಂತಾ ಬಿಜೆಪಿಯನ್ನ ಹಾಡಿ ಹೋಗಳುತ್ತಿದ್ದಾರೆ ಎಂದರು.

ಪಕ್ಷದ ಹೆಸರು ಮುಂದೆ ಸೆಕ್ಯುಲರ್ ಅಂತಾ ಬೇರೆ ಇಟ್ಟುಕೊಂಡಿದ್ದಾರೆ. ಸೆಕ್ಯುಲರ್ ಅಂದ್ರೆ ಏನ್ ಅರ್ಥ- ಜಾತ್ಯಾತೀತ. ಬಿಜೆಪಿ ಜೊತೆ ಸೇರಿಕೊಂಡ್ರೆ ಏನಂತ ಕರಿಬೇಕು ಇವರನ್ನ. ಹೆಸರಿನಲ್ಲಿ ರಾಮ ಇದ್ದರೆ ಸಾಲದು ನಡವಳಿಕೆ ಮುಖ್ಯ ಅನ್ನೋ ಕುಮಾರಸ್ವಾಮಿ, ಮೊದಲು ನಡವಳಿಕೆ ಕಲಿತುಕೊಳ್ಳಲಿ. ಆಮೇಲೆ ಬೇರೆಯವರಿಗೆ ಹೇಳಲಿ. ಬಿಜೆಪಿಯವರಿಗೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲ್ತಿವಿ ಅಂತಾ ಭಯ ಬಂದಿದೆ. ಆ ಭಯದಿಂದ ಇವೆಲ್ಲ ಪ್ರಚೋದನೆಗಳನ್ನ ಮಾಡ್ತಿದ್ದಾರೆ. ಯಾವುದೇ ವಿಚಾರ ಇಲ್ಲದೇ ಇದ್ರೂ ಅಲ್ಲಿ ಇಶ್ಯೂ ಮಾಡಿ ಕೋಮುವಾದ ಸೃಷ್ಟಿಸುತ್ತಿದ್ದಾರೆ. ನಾವು 136 ಜನ ಶಾಸಕರಿದ್ದೀವಿ, 43% ಮತ ಗಳಿಕೆ ಮಾಡಿದ್ದೇವೆ. ಅವರಿಗೆ 37% ಬಂದಿದೆ, ಬಿದ್ದೋಗೋಕೆ ಹೇಗೆ ಸಾಧ್ಯ ಆಗುತ್ತೆ. ಯಾರೇ ಕಾನೂನು ಕೈಗೆತ್ತಿಕೊಂಡರೂ ಸರ್ಕಾರ ಸಹಿಸಲ್ಲ, ಕ್ರಮ ತೆಗೆದುಕೊಳ್ತಿವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.