ವಿಜಯಪುರದ ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ಜಮೀನಿನಲ್ಲಿ ಎರಡು ವರ್ಷದ ಮಗು ಸಾತ್ವಿಕ್ ಬುಧವಾರ ಸಂಜೆ ಕೊಳವೇ ಬಾವಿಗೆ ಬಿದ್ದ ಘಟನೆ ನಡೆದಿದ್ದು, ಸಂಜೆ ೬ ಗಂಟೆ ನಂತರ ನಿರಂತರ ಕಾರ್ಯಾಚರಣೆ ಆರಂಭವಾಗಿದೆ . ಈ ಕ್ಷಣಕ್ಕೂ ಕೂಡ ಕಾರ್ಯಾಚರಣೆ ಮುಂದುವರೆದಿದ್ದು, ಬಹುತೇಕ SDRF ತಂಡ ಮಗುವಿನ ಸಮೀಪ ತಲುಪಿದೆ ಎಂದು ಹೇಳಲಾಗ್ತಿದೆ.

೧೮ ಅಡಿ ಆಳ ಕೊರೆದ ನಂತರ ದೊಡ್ಡ ಬಂಡೆಕಲ್ಲುಗಳು ಅಡ್ಡ ಸಿಕ್ಕಿದ್ದು ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗಿತ್ತು. ಕ್ಷಣಕಾಲವು ಕಾರ್ಯಾಚರಣೆ ನಿಲ್ಲಿಸದೆ ರಾತ್ರಿಯಿಡೀ ಕಾರ್ಯಾಚರಣೆ ಮುಂದುವರೆಲಸಾಗಿದೆ. ಇದೀಗ ಬಹುತೇಕ ಬಂಡೆ ಕೊರೆಯಲಾಗಿದ್ದು ಕೊನೆ ಹಂತದ ಕಾರ್ಯಾಚರಣೆ ನಡೆಸಲಾಗಿದೆ.

ಬುಧವಾರವಷ್ಟೇ ಶಂಕರಪ್ಪ ಈ ಮಗುವಿನ ಅಜ್ಜ ಈ ಕೊಳವೆ ಬಾವಿಯನ್ನ ಕೊರೆಸಿದ್ದರು . ನೀರು ಸಿಗದ ಕಾರಣ ಕೊಳವೆ ಬಾವಿಯನ್ನ ಮುಚ್ಚದೆ ಹಾಗೇ ಬಿಡಲಾಗಿತ್ತು. ಇಂದು ಆಟ ಆಡಲು ಜಮೀನಿಗೆ ತೆರಳಿದ್ದ ಮಗು ಸಾತ್ವಿಕ್ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದು ಈ ಅವಘಡ ಸಂಭವಿಸಿದೆ. ಮಾಹಿತಿ ಲಭ್ಯವಾಗ್ತಿದ್ದಂತೆ ಸ್ಥಳಕ್ಕೆ ಧೌಡಾಯಿಸಿದ ಅಧಿಕಾರಿಗಳ ತಂಡ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮಗು ಸದ್ಯಕ್ಕೆ ಸುರಕ್ಷಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು , ಆಕ್ಸಿಜನ್ ಪೂರೈಕೆ ಸೇರಿದ ಹಾಗೇ ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕಾರ್ಯಾಚರಣೆ ಆರಂಭಿಸಿದ್ದಾರೆ. ೩ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಗ್ತಿದ್ದು ಈಗಾಗಲೇ ಮಗುವಿನ ಸಮೀಪ ತಲುಪಲಾಗಿದ್ದು , ಬಂಡೆ ಅಡ್ಡಿಯಾಗಿದೆ. ಬಂಡೆಯನ್ನು ಕೊರೆದು ಕಾರ್ಯಾಚರಣೆ ಮುಂದುವರೆಸಲಾಗ್ತಿದೆ. ಕ್ಯಾಮೆರಾದಲ್ಲಿ ಮಗುವಿನ ಚಲನವಲನ ಕಂಡುಬಂದಿದ್ದು , ಮಗು ಸಾತ್ವಿಕ್ ಬದುಕಿ ಬರಲಿ ಎಂದು ಎಲ್ಲೆಡೆ ಪ್ರಾರ್ಥಿಸಲಾಗಿದೆ.






