ಬೆಂಗಳೂರು: ಬಹು ನಿರೀಕ್ಷಿತ ಟಿ20 ವಲ್ಡ್ ಕಪ್( T20 World Cup) ಕ್ರಿಕೆಟ್ ಪಂದ್ಯಕ್ಕೆ ಭಾರತದ ತಂಡವನ್ನು ಪ್ರಕಟಿಸಲಾಗಿದ್ದು, ಆಟಗಾರ ಶುಭಮನ್ ಗಿಲ್(Shubman Gill )ಅವರನ್ನು ಕೈ ಬಿಡಲಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು 15 ಸದಸ್ಯರ ತಂಡದ ಈ ನಿರ್ಧಾರವು ಆಘಾತಕಾರಿಯಾಗಿದೆ ಎಂದು ಕ್ರಿಕೆಟ್ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂಬರುವ 2026ರ ಫೆಬ್ರವರಿ 7 ರಂದು ಪ್ರಾರಂಭವಾಗಲಿರುವ 20 ತಂಡಗಳ ಟೂರ್ನಮೆಂಟ್ನಲ್ಲಿ ಅಕ್ಷರ್ ಪಟೇಲ್ಗೆ ಉಪ ನಾಯಕನ ಪಟ್ಟ ಕಟ್ಟಲಾಗಿದೆ. ಗಿಲ್ ಜೊತೆಗೆ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಜಿತೇಶ್ ಶರ್ಮಾ ಅವರನ್ನು ಬ್ಯಾಕಪ್ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಬಳಿಕ ಗಿಲ್ಗೆ ಕೊಕ್ ನೀಡಲಾಗಿದೆ ಎಂಬ ಚರ್ಚೆಗಳು ನಡೆಯುತ್ತಿದೆ.

ತಂಡದ ಆಯ್ಕೆಯ ಬಗ್ಗೆ ಆಯ್ಕೆ ಸಮಿತಿ ಅಧ್ಯಕ್ಷ ಅಗರ್ಕರ್ ಮಾಹಿತಿ ನೀಡಿದ್ದಾರೆ. ಟಿ20 ಕ್ರಿಕೆಟ್ ತಂಡದಲ್ಲಿ 15 ಆಟಗಾರರು ಇರಲಿದ್ದಾರೆ. ನಾಯಕನಾಗಿ ಇನ್ನೂ ಟಿ20ಐ ಸರಣಿಯನ್ನು ಸೋಲದೇ ಇರುವ ಸೂರ್ಯಕುಮಾರ್ , ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರ ದಾರಿ ತುಳಿಯಲು ಈ ನಿರ್ಧಾರ ನೆರವಾಗುತ್ತದೆ.

ಅಲ್ಲದೇ ಸಂಜು ಸ್ಯಾಮ್ಸನ್ ಅಭಿಷೇಕ್ ಶರ್ಮಾ ಅವರೊಂದಿಗೆ ಬ್ಯಾಟಿಂಗ್ ಆರಂಭಿಸಲಿದ್ದಾರೆ ಎಂದು ಸುಳಿವು ನೀಡಿದ್ದಾರೆ. ಶುಬ್ಮನ್ ಗಿಲ್ ಪ್ರಸ್ತುತ ರನ್ಗಳ ಕೊರತೆಯನ್ನು ಹೊಂದಿದ್ದಾರೆ ಮತ್ತು ಕಳೆದ ವಿಶ್ವಕಪ್ ನ್ನು ಸಹ ತಪ್ಪಿಸಿಕೊಂಡಿದ್ದಾರೆ ಎಂದು ಅಗರ್ಕರ್ ಹೇಳಿದ್ದಾರೆ.

ಗಿಲ್ ಮತ್ತು ಜಿತೇಶ್ ಅವರನ್ನು ಕೈಬಿಟ್ಟಿರುವುದರಿಂದ, ರಿಂಕು ಸಿಂಗ್ ಅವರನ್ನು ವಿಶ್ವಕಪ್ ತಂಡಕ್ಕೆ ಮರಳಿ ಕರೆಸಿಕೊಳ್ಳಲಾಗಿದೆ. ಏಷ್ಯಾ ಕಪ್ ವಿಜೇತ ತಂಡದ ಭಾಗವಾಗಿದ್ದ ಅವರು, ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಗೆಲುವಿನ ರನ್ ಗಳಿಸಿದ್ದರು. ಆದರೆ ದಕ್ಷಿಣ ಆಫ್ರಿಕಾ ಸರಣಿಗೆ ತಂಡದಿಂದ ಆಶ್ಚರ್ಯಕರವಾಗಿ ಕೈಬಿಡಲಾಗಿತ್ತು ಎಂಬುದು ಗಮನಾರ್ಹ. ಫೆಬ್ರವರಿ 7 ರಂದು ಟೂರ್ನಮೆಂಟ್ ಪ್ರಾರಂಭವಾಗುವ ಮೊದಲು ಜನವರಿ 21 ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡುವಾಗ ಭಾರತದ ಟಿ20 ವಿಶ್ವಕಪ್ ತಂಡಕ್ಕೆ ಹೆಚ್ಚು ತಯಾರಿಗೆ ಹೆಚ್ಚಿನ ಸಮಯ ಸಿಗಲಿದೆ.









