ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಘಟಾನುಘಟಿಗಳಿಗೆ ಆಹ್ವಾನ ನೀಡಲಾಗಿದೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಗಾಯಕಿ ಆಶಾ ಬೋಸ್ಲೆ, ದೈತ್ಯ ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾ, ಬಾಲಿವುಡ್ ನಟರಾದ ಬಿಗ್ ಬಿ ಅಮಿತಾಭ್ ಬಚ್ಚನ್, ರಾಮಾಯಣ ಧಾರವಾಹಿಯಲ್ಲಿ ರಾಮ ಮತ್ತು ಸೀತೆಯ ಪಾತ್ರಧಾರಿಗಳಾದ ಅರುಣ್ ಗೋವಿಲ್, ದೀಪಿಕಾ ಚಿಖಿಲಾಗೂ ಆಹ್ವಾನ ನೀಡಲಾಗಿದೆ.
7 ಸಾವಿರ ಮಂದಿಗೆ ರಾಮ ಮಂದಿರ ಟ್ರಸ್ಟ್ ಆಹ್ವಾನ ನೀಡಿದೆ. ಇವರಲ್ಲಿ3 ಸಾವಿರ ಮಂದಿ ವಿವಿಐಪಿಗಳು. ರಾಮಮಂದಿರ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ 50 ಕರಸೇವಕರ ಕುಟುಂಬಸ್ಥರಿಗೂ ಆಹ್ವಾನ ನೀಡಲಾಗಿದೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಯೋಗ ಗುರು ಬಾಬಾ ರಾಮದೇವ್, 4 ಸಾವಿರ ಸ್ವಾಮೀಜಿಗಳು, ನ್ಯಾಯಮೂರ್ತಿಗಳು ಮಾಧ್ಯಮದವರು, ಲೇಖಕರು, ವಿಜ್ಞಾನಿಗಳಿಗೆ ಆಹ್ವಾನ ನೀಡಲಾಗಿದೆ.
ಜೊತೆಗೆ 50 ರಾಷ್ಟ್ರಗಳಿಗೆ ತಲಾ ಒಬ್ಬ ಪ್ರತಿನಿಧಿಯನ್ನು ಆಹ್ವಾನಿಸಲು ರಾಮಮಂದಿರ ಟ್ರಸ್ಟ್ ತೀರ್ಮಾನಿಸಿದೆ.
ಐದು ವರ್ಷದ ಬಾಲಕನ ರೂಪದಲ್ಲಿರುವ ರಾಮಲಲ್ಲಾನ ಮೂರು ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇವುಗಳಲ್ಲಿ ಎರಡು ಕರ್ನಾಟಕದಲ್ಲಿ ನಿರ್ಮಿಸಲಾಗ್ತಿದ್ದು, ಒಂದು ಮೂರ್ತಿ ರಾಜಸ್ಥಾನದಲ್ಲಿ ನಿರ್ಮಾಣವಾಗ್ತಿದೆ.