
ಬೀದರ್:ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿಸಿಎಂ. ಡಿ.ಕೆ.ಶಿವಕುಮಾರ್,ಹಾಗೂ ಮಾನ್ಯ ಅಶೋಕ್ ಖೇಣಿ ಅವರ ಬೀದರ ಜಿಲ್ಲೆಯ ಮಾಜಿ ಶಾಸಕರು, ಇವರ ಆದೇಶದ ಮೇರೆಗೆ (ಇಂಟಾಕ್ INTUC) ಯುವ ಘಟಕ ಬೀದರ ಜಿಲ್ಲೆಗೆ ಉಪಾಧ್ಯಕ್ಷರನ್ನಾಗಿ ಶ್ರೀ ಅಶೋಕ ಕಾರ್ಪೆಂಟರ್ ದೌಳಪ್ಪ ಆದ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿ ಎಂದು ತಿಳಿಸಲು ಹರ್ಶಿಸುತ್ತೇನೆ.

ತಾವು ಕೂಡಲೇ ಅಧಿಕಾರವನ್ನು ವಯಿಸಿಕೊಂಡು ಜಿಲ್ಲೆಯಲ್ಲಿ (INTUC) ಪರವಾಗಿ ಸಂಘಟನೆಗಳನ್ನು ರಚಿಸಿ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿ ಪಕ್ಷದ ಮುಖಂಡರ ಮಾರ್ಗದರ್ಶನ ಹಾಗೂ ಸ್ಥಳಿಯ ನಾಯಕರ ಸಹಕಾರದೊಂದಿಗೆ ತಮಗೆ ನೀಡಲಾಗಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಪಕ್ಷದ ಸಂಘಟನೆಗೆ ಶ್ರಮಿಸುವಂತೆ ಸೂಚಿಸಲಾಗಿದೆ.ಈ ದಿಸೆಯಲ್ಲಿ ತಮಗೆ ಹೆಚ್ಚಿನ ಯಶಸ್ಸು ಸಿಗಲ್ಲೆಂದು ಹಾರೈಸಿದ್ದಾರೆ.










