ವ್ಯಕ್ತಿ ಪೂಜೆ ಮಾಡೋದು ಬಿಟ್ಟು ಪಕ್ಷದ ಪೂಜೆ ಮಾಡಿ. ಎಲ್ಲರೂ ಬಾಯಿ ಮುಚ್ಚಿಕೊಂಡು ಪಕ್ಷದ ಗೆಲುವಿಗೆ ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ಶಾಸಕ ಜಮೀರ್ ಅಹ್ಮದ್ ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರೋಕ್ಷವಾಗಿ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಈ ಬಗ್ಗೆ ಚರ್ಚೆ ಅನಾವಶ್ಯಕ. ಎಲ್ಲರೂ ಬಾಯಿಮುಚ್ಚಿಕೊಂಡು ಪಕ್ಷ ಗೆಲುವಿನತ್ತ ಹಗಲು-ರಾತ್ರಿ ಕೆಲಸ ಮಾಡಬೇಕು ಎಂದರು.
ಇದೇ ವೇಳೆಮಾಜಿ ಸಿಎಂ ಬಿಎಸ್ ವೈ ರಾಜಕೀಯದಿಂದ ದಿಢೀರ್ ನಿವೃತ್ತಿ ಘೋಷಣೆ ಮಾಡುವುದು ಸರಿಯಲ್ಲ. ಅವರಿಗೆ ಇನ್ನು ರಾಜಕಾರಣ ಮಾಡೊ ಶಕ್ತಿ ಇದೆ. ಅವರಿಂದ ರಾಜ್ಯದಲ್ಲಿ ಬಿಜೆಪಿಗೆ 104ಸ್ಥಾನ ಬಂದಿತ್ತು ಏಕಾಏಕಿ ಈಗ ಅವರು ನಿವೃತ್ತಿಯಾಗಿದ್ದು ನನಗೆ ಬಹಳ ಬೇಸರವಾಗಿದೆ ಎಂದು ಅವರು ಹೇಳಿದರು.

ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡಿ ಪಕ್ಷ ಅಧಿಕಾರಕ್ಕೆ ತಂದಿದ್ದು ಅವರಲ್ಲಿ ಇನ್ನು ಶಕ್ತಿ ಇದ್ದರು ಬಿಜೆಪಿಯವರು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಸಿದರು. ಅಲ್ಲದೇ ಹೈಕಮಾಂಡ್ ಅವರಿಗೆ ಸಾಕಷ್ಟು ನೋವು ನೀಡಿದೆ ಅದೆಲ್ಲಾ ನುಂಗಿಕೊಂಡು ಪಾರ್ಟಿ ಪರವಾಗೇ ಮಾತನಾಡ್ತಾರೆ. ಇವತ್ತು ಕ್ಷೇತ್ರತ್ಯಾಗ ಮಾಡಿದ್ದಾರೆ. ಆದರೆ ಅದರಿಂದ ನಮ್ಮ ಪಕ್ಷಕ್ಕೆ ನಷ್ಟ ಇಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದರು.