ಪ್ರಸ್ತುತ 12 ರೇಕ್ ಕಲ್ಲಿದ್ದಲು ಸ್ಟಾಕ್ ಲಭ್ಯವಿದ್ದು, ಇದು ಎರಡು ದಿನ ಮಾತ್ರ ಥರ್ಮಲ್ ಪವರ್ ಸ್ಟೇಷನ್ಗಳಿಗೆ ಉಪಯೋಗಿಸಬಹುದು. ಕಲ್ಲಿದ್ದಲನ್ನು ಸಂರಕ್ಷಿಸಲು, ಉಷ್ಣ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಸೀಮಿತಗೊಳಿಸಲಾಗಿದೆ ಮತ್ತು ವಿದ್ಯುತ್ ಕಡಿತವನ್ನು ಆಶ್ರಯಿಸಲಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಧನ ಸಚಿವ ಸುನೀಲ್ ಕುಮಾರ್ ಕಲಿದ್ದಲಿನ ಅಸರ್ಮಪಕ ಪೂರೈಕೆಯ ಪ್ರಸ್ತುತ ಬಿಕ್ಕಟ್ಟನ್ನು ಎರಡು ದಿನಗಳಲ್ಲಿ ಪರಿಹರಿಸಲಾಗುವುದು ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ. ಕಲ್ಲಿದ್ದಲಿನ ಕೊರತೆಯಿಂದಾಗಿ ಕರ್ನಾಟಕದಲ್ಲಿ ಯಾವುದೇ ಥರ್ಮಲ್ ಘಟಕವನ್ನು ಮುಚ್ಚಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಒಡಿಶಾದ ಮಹಾನದಿ ಕಲ್ಲಿದ್ದಲು ಕ್ಷೇತ್ರದಿಂದ ಕಳುಹಿಸಿದ ಕಲ್ಲಿದ್ದಲಿನ ಕುಂಟೆ ಮಂಗಳವಾರ ಕರ್ನಾಟಕವನ್ನು ತಲುಪಲಿದೆ. ಸೋಮವಾರ ಲೋಡ್ ಆಗುತ್ತಿರುವ ಇನ್ನೊಂದು ರೇಕ್ ಕಲ್ಲಿದ್ದಲು ಬುಧವಾರ ಬರಲಿದೆ ಮತ್ತು ಇದು ಬಿಕ್ಕಟ್ಟನ್ನು ಪರಿಹರಿಸುತ್ತದೆ ಎಂದು ಕರ್ನಾಟಕ ವಿದ್ಯುಕ್ತ್ ಪ್ರಸರಣ ನಿಗಮ ಕಾರ್ಪೊರೇಶನ್ ಲಿಮಿಟೆಡ್(KPTCL)ಗೆ ಹೊಸದಾಗಿ ನೇಮಕವಾಗಿರುವ ಜೂನಿಯರ್ ಪವರ್‌ಮ್ಯಾನ್‌ಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಹೇಳಿದ್ದಾರೆ.
ಇಷ್ಟು ದಿನ ನಮಗೆ ಸುಮಾರು 10 ರೇಕ್‌ಗಳನ್ನು ಪೂರೈಸಲಾಯಿತು. ಈಗ, ನಾವು ಇದನ್ನು 14 ರೇಕ್‌ಗಳಿಗೆ ಹೆಚ್ಚಿಸುವಂತೆ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿಗೆ ಮನವಿ ಮಾಡಿದ್ದೇವೆ. ಇವುಗಳಲ್ಲಿ, ಎರಡು ರೇಕ್ ಕಲ್ಲಿದ್ದಲನ್ನು ತಕ್ಷಣವೇ ನಮ್ಮ ಥರ್ಮಲ್ ಪ್ಲಾಂಟ್‌ಗಳಿಗೆ ತಲುಪಿಸಲಾಗುವುದು ಮತ್ತು ಇತರ ಎರಡು ರೇಕ್‌ಗಳು ನವೆಂಬರ್‌ನಲ್ಲಿ ತಲುಪುತ್ತವೆ ಎಂದು ಹೇಳಿದ್ದಾರೆ.
ಕಲ್ಲಿದ್ದಲಿನ ಕೊರತೆಯು ರಾಜ್ಯದಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಒಪ್ಪಿಕೊಂಡ ಸುನೀಲ್ ಕುಮಾರ್, ನಾವು ಬಿಕ್ಕಟ್ಟನ್ನು ಪರಿಹರಿಸಲು ನಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ, ನಾವು ಕೇಂದ್ರ ಸರ್ಕಾರಕ್ಕೆ ಒಂದು ಜ್ಞಾಪನಾ ಪತ್ರವನ್ನು ಸಲ್ಲಿಸಿದ್ದೇವೆ ಮತ್ತು ಅದು ನಮ್ಮ ಮನವಿಗೆ ಶೀಘ್ರವಾಗಿ ಸ್ಪಂದಿಸಿದೆ ಎಂದು ಹೇಳಿದ್ದಾರೆ.
ಈ ಮಧ್ಯೆ, ರಾಜ್ಯ ಸರ್ಕಾರವು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರಿಗೆ ಕರ್ನಾಟಕಕ್ಕೆ ಕಲ್ಲಿದ್ದಲು ಬ್ಲಾಕ್ಗಳನ್ನು ಹಂಚಿಕೆ ಮಾಡಿದ ಮಹಾರಾಷ್ಟ್ರದ ಮಂದಾಕಿನಿ ಮತ್ತು ಬಾರಂಜಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿದೆ. “ನಾವು ಕಲ್ಲಿದ್ದಲು ಹೊರತೆಗೆಯಲು ಅನುಮತಿ ಪಡೆದ ತಕ್ಷಣ, ನಾವು ಕರ್ನಾಟಕಕ್ಕೆ ಸಮರ್ಪಕ ಕಲ್ಲಿದ್ದಲು ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳುತ್ತೇವೆ” ಎಂದು ಸಚಿವ ಸುನೀಲ್ ಕುಮಾರ್ ವಿವರಿಸಿದ್ದಾರೆ.