ಪ್ರಯಾಗರಾಜ್ ನ (Prayagaraj) ಮಹಾಕುಂಭಮೇಳದಲ್ಲಿ (Maha kumbh) ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ತೀರ್ಥಸ್ನಾನದಲ್ಲಿ (Holy dip) ಮಿಂದೇಳುತ್ತಿದ್ದು, ಈ ಮಧ್ಯೆ ಕೆಲ ಕಿಡಿಗೇಡಿಗಳು ಈ ರೀತಿಯ ಪೋಟೋ ಮತ್ತು ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

ಹೌದು, ಮಹಾ ಕುಂಭಮೇಳದ ಪುಣ್ಯ ಸ್ನಾನದ ವೇಳೆ ಮಹಿಳೆಯರ ತೀರ್ಥಸ್ನಾನ, ಬಟ್ಟೆ ಬದಲಾಯಿಸುವ ಪೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ (Social media) ಹಂಚಿಕೊಳ್ಳಲಾಗಿದ್ದು, ಟೆಲಿಗ್ರಾಮ್ ನಲ್ಲಿ (Telegram) ಮಾರಾಟ ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ಹೀಗೆ ಮಹಿಳೆಯರ ಫೋಟೋ ಮತ್ತು ವಿಡಿಯೋ ಗಳನ್ನು ಮಾರಾಟ ಮಾಡುವವರ ಮೇಲೆ ಕೇಸ್ ದಾಖಲಿಸಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಬೇರೆಡೆಯ ಪೋಟೋಗಳನ್ನು ಕುಂಭಮೇಳದ ಪೋಟೋ, ವಿಡಿಯೋ ಎಂದು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯಿದೆ.

ಈ ರೀತಿಯ ವಿಕೃತ ಮನಸ್ಸಿನ ವ್ಯಕ್ತಿಗಳಿಂದ ಪೋಟೋ, ವಿಡಿಯೋ ಮಾರಾಟವಾಗಿದ್ದು, ಮಹಾಕುಂಭಮೇಳದ ಡಿಐಜಿ ವೈಭವ ಕೃಷ್ಣ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ರವಾನೆ ಮಾಡಿದ್ದಾರೆ.