ಬಿಗ್ ಬಾಸ್ ಕನ್ನಡ ಸೀಸನ್ 11 ಈ ಬಾರಿಯ ವೀಕೆಂಡ್ ಎಪಿಸೋಡ್ ನಲ್ಲಿ ಭಾರಿ ಹೈಡ್ರಾಮವೇ ನಡೆದುಹೋಗಿತ್ತು. ಪ್ರೇಕ್ಷಕರ ವೋಟಿಂಗ್ ನಿಂದ ಸೇಫ್ ಆದರೂ ಕೂಡ, ತಾನೇ ಮನೆಯಿಂದ ಹೊರ ಹೋಗಲು ಇಚ್ಚಿಸುತ್ತಿರುವುದಾಗಿ ಕಂಟೆಸ್ಟೆಂಟ್ ಶೋಭಾ ಶೆಟ್ಟಿ ಹೇಳಿಕೊಂಡಿದ್ದರು ಇದರಿಂದ ಕಿಚ್ಚ ಗರಂ ಆಗಿದ್ರು.
ಹೀಗಾಗಿ ಡೇಂಜರ್ ಜೋನ್ ನಲ್ಲಿದ್ದ ಶಿಷ್ಯರ್ ಮತ್ತು ಐಶ್ವರ್ಯ ರನ್ನು ಸೇಫ್ ಮಾಡಿ ಬಿಗ್ ಬಾಸ್ ಮನೆಯ ಡೋರ್ ಓಪನ್ ಮಾಡಿ ಕಿಚ್ಚ ಶೋಭಾ ಶೆಟ್ಟಿ ಹೊರಬರುವಂತೆ ಹೇಳಿದರು ಅದರಂತೆ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಶೋಭಿತ ಶೆಟ್ಟಿ, ಇದೀಗ ತಮ್ಮ instagram ನಲ್ಲಿ ಪೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ.
ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನಿ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ, ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ.. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ, ಜೀವನದ ಜವಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ!
ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೀನಿ, ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ. ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ, ಹಾಗು ನನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು .
ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ.
ಇಂತಿ ನಿಮ್ಮ ಪ್ರೀತಿಯ, ಶೋಭಾ ಶೆಟ್ಟಿ
ಎಂದು ಭಾವನಾತ್ಮಕವಾಗಿ ಶೋಭಾ ಬರೆದುಕೊಂಡಿದ್ದಾರೆ.