ಹುಬ್ಬಳ್ಳಿ : ವರುಣದಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿದ್ದ ನಟ ಶಿವರಾಜ್ಕುಮಾರ್ ಬಗ್ಗೆ ಸಂಸದ ಪ್ರತಾಪ್ ಸಿಂಹ ಅಸಮಾಧಾನ ಹೊರಹಾಕಿದ್ದರು. ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವ ಭಾವ ಭಕುತಿಗೆ ಎಂದು ಟ್ವೀಟಾಯಿಸಿದ್ದರು.
ಇಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಶಿವರಾಜ್ಕುಮಾರ್ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಯಾವ ನಟರು ಯಾವ ಪಕ್ಷದ ಪರವಾಗಿ ಬೇಕಿದ್ದರೂ ಪ್ರಚಾರ ನಡೆಸಬಹುದು . ಇದರಿಂದ ನಮಗೇನು ಅಭ್ಯಂಥರವಿಲ್ಲ ಎಂದಿದ್ದಾರೆ.
ಹಾವೇರಿಗೆ ಪ್ರಧಾನಿ ಮೋದಿ ಕೂಡ ಬರ್ತಿದ್ದಾರೆ. ಮೊದಲಿಗಿಂತಲೂ ಪ್ರಧಾನಿ ಅಲೆ ಜಾಸ್ತಿಯಾಗ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.