ಸದ್ಯ ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ಬಹಳ ಜೋರಾಗಿದೆ. ಈ ಬಗ್ಗೆ ಕಾಂಗ್ರಸ್ ನ ಹಲವಾರು ಸೀನಿಯರ್ ಲೀಡರ್ಸ್ ರೇಸ್‌ಗೆ ಧುಮುಕಿದ್ದಾರೆ. ಹೀಗೆ ಸಿಎಂ ಆಕಾಂಕ್ಷಿಗಳ ವಿಚಾರವಾಗಿ ಸಚಿವ ಶಿವಾನಂದ್ ಪಾಟೀಲ್ (Shivanand patil) ಪ್ರತಿಕ್ರಿಯಿಸಿದ್ದಾರೆ.
ಈವಿಚಾರದಲ್ಲಿ ಇಬ್ಬರು ಸಚಿವರ ನಡುವೆ ಮಾತಿನ ಯುದ್ಧ ಆರಂಭವಾಗಿದ್ದು, ಸಿನೀಯಾರಿಟಿಯ ವಿವಾರ ಮುನ್ನಲೆಗೆ ಬಂದಿದೆ. ಪಕ್ಷದಲ್ಲಿ ಎಲ್ಲಾ ನಾಯಕರಿಗೂ ಅವರವರ ಅರ್ಹತೆ, ಯೋಗ್ಯತೆ, ಅವಕಾಶ ನೋಡಿ ಸಿಎಂ ಮಾಡಿರಬಹುದು.ನಮ್ಮ ಪಕ್ಷದಲ್ಲೂ ಬಹಳ ಜನ ಸೀನಿಯರ್ ಲೀಡರ್ ಗಳು ಇದ್ದಾರೆ.ಅಂತಹ ಸೀನಿಯರ್ ಗಳು ಸಿಎಂ ಆದರೆ ಖುಷಿ ಪಡಬೇಕು ದುಃಖ ಪಡುವ ಅವಶ್ಯಕತೆ ಇಲ್ಲ ಅಂತ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಆ ಮೂಲಕ ಶಿವಾನಂದ ಪಾಟೀಲ್‌ಗಿಂತ ತಾನು ಸೀನಿಯರ್ ಎಂದು ಹೇಳಿಕೆ ಕೊಟ್ಟಿದ್ದ ಸಚಿವ ಎಂ.ಬಿ.ಪಾಟೀಲ್ (M B patil) ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ನನಗೆ ಸಿಎಂ ಆಗುವ ಯಾವ ಆಸೆಯೂ ಇಲ್ಲ, ಎಂ.ಬಿ.ಪಾಟೀಲ್ ಸಿಎಂ ಆಗೋದಿದ್ರೂ ನನಗೇನು ಅಭ್ಯಂತರವಿಲ್ಲ ಎಂದಿದ್ದಾರೆ.