ಕಳೆದುಕೊಂಡಿದ್ದ ವಸ್ತುಗಳನ್ನು ಪೊಲೀಸರು ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರು ಕಳ್ಳರಿಂದ ಜಪ್ತಿ ಮಾಡಲಾಗಿದ್ದ ಒಟ್ಟು 4.32 ಕೋಟಿ ಮೌಲ್ಯದ ವಸುಗಳನ್ನು ಹಿಂದಿರುಗಿಸುವ ಮೂಲಕ ಮಾಲೀಕರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಚಿನ್ನ, ಬೆಳ್ಳಿ, ಹಣ, ವಾಹನಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ನಿಮ್ಮ ರಕ್ಷಣೆಗೆ ನಾವು ಕಟಿ ಬದ್ದರಾಗಿದ್ದೇವೆ ಎಂಬುದನ್ನು ಪೊಲೀಸರು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
