ಬಿಜೆಪಿ, ಜೆಡಿಎಸ್ ಎರಡಲ್ಲ 4 ಸೇರಿದ್ರೂ 2028ಕ್ಕೆ ನಮ್ಮದೇ ಸರ್ಕಾರ, ಶಾಸಕ ಶಿವಲಿಂಗೇಗೌಡರು (MLA Shivalinge Gowda) ಕನಕಪುರ ಕ್ಷೇತ್ರಕ್ಕಿಂತ ಅರಸೀಕೆರೆಗೆ (Arsikere) ಹೆಚ್ಚು ಕೆಲಸ ಮಾಡಿದ್ದಾರೆ. ಅವರ ಕಾಟ ನಮಗೆ ಜಾಸ್ತಿ. ಅಭಿವೃದ್ಧಿ ಕೆಲಸಗಳಿಗಾಗಿ ಸಿಎಂ ಮನೆಗೆ ತಿರುಗಿ 4 ಜೊತೆ ಚಪ್ಪಲಿ ಸವೆಸಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DCM D.K Shivakumar) ಹೇಳಿದರು.

ಅರಸೀಕೆರೆಯಲ್ಲಿ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ವೇಳೆ, ಇಲ್ಲಿಗೆ ನಾವು ಬರಬೇಕಾದರೆ ಸುಮ್ಮನೆ ಬರಲಿಲ್ಲ. ಇಡೀ ರಾಜ್ಯದಲ್ಲಿ 136 ಸೀಟು ಗೆದ್ದಾಗ, ಹಾಸನದಲ್ಲಿ ಒಬ್ಬರು ಶಾಸಕರು, ಒಬ್ಬರು ಎಂಪಿ ಗೆಲ್ಲಿಸಿ ಶಕ್ತಿ ತಂದಿದ್ದೀರಿ. ನಿಮ್ಮ ಋಣ ತೀರಿಸಲು ಇಲ್ಲಿಗೆ ಬಂದಿದ್ದೇವೆ ಎಂದರು. ಹಿಂದೆ ಅರಸೀಕೆರೆಗೆ ಮಲತಾಯಿ ಧೋರಣೆ ಮಾಡಲಾಗಿತ್ತು. ನಾವು ನಾಲ್ಕು ಋಣಗಳನ್ನು ತೀರಿಸಬೇಕು. ತಂದೆ-ತಾಯಿ, ದೇವರ, ಗುರು ಮತ್ತು ಸಮಾಜದ್ದು. ಈಗ ಇಲ್ಲಿ ನೀರಿನ ಬವಣೆಯನ್ನು ಶಿವಲಿಂಗೇಗೌಡರು ನಿವಾರಣೆ ಮಾಡಿದ್ದಾರೆ. ಇಂತಹ ಶಾಸಕರು ಎಲ್ಲಾ ಕ್ಷೇತ್ರಗಳಲ್ಲಿ ಇದ್ದರೆ 138 ಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತೇವೆ. ಯೋಗಿ ಎಂದು ಕರೆಸಿಕೊಳ್ಳುವ ಮುನ್ನ ಉಪಯೋಗಿ ಎನ್ನಿಸಿಕೊಳ್ಳಬೇಕು. ನನಗೆ ಬಹಳ ಸಂತೋಷ ಆಗುತ್ತಿದೆ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಜಿಲ್ಲೆಯಲ್ಲಿ ಒಬ್ಬರೇ ಶಾಸಕರು ಗೆದ್ದಿರಬಹುದು. ಮುಂದಿನ ವಿಧಾಸನಭೆಯಲ್ಲಿ ಹಾಸನ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ.

ನಾವು ಹೋದ ಮೇಲೂ ಕೆಲಸ ಶಾಶ್ವತವಾಗಿರಬೇಕು. ಇಡೀ ದೇಶಕ್ಕೆ ಮಾದರಿಯಾದ ಐದು ಗ್ಯಾರೆಂಟಿ ಕೊಟ್ಟಿದ್ದೇವೆ. ಆದರೆ ಬಿಜೆಪಿಯವರು ಭಾವನೆಗಳ ಮೇಲೆ ರಾಜಕಾರಣ ಮಾಡ್ತಿದ್ದಾರೆ. ಜಾತಿ, ಧರ್ಮ, ದೇವರ ಮೇಲೆ ರಾಜಕಾರಣ ಮಾಡ್ತಿದ್ದಾರೆ. ನಮಗೆ ದೇವರು ಇಲ್ವಾ? ನಮಗೆ ದೇವರ ಮೇಲೆ ನಂಬಿಕೆ ಇಲ್ವಾ? ನಾವೆಲ್ಲ ಸಿದ್ದರಾಮಯ್ಯ(Siddaramaiah), ಶಿವಲಿಂಗೇಗೌಡ(Shivalingegowda), ಡಿ.ಕೆ.ಶಿವಕುಮಾರ್(DK Shivakumar) ಅಂಥ ಹೆಸರು ಇಟ್ಟುಕೊಂಡಿಲ್ವಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಎಲ್ಲಾ ಧರ್ಮಗಳನ್ನು ಕಾಪಾಡಲು ಐದು ಗ್ಯಾರೆಂಟಿ ರೂಪಿಸಿದೆವು ಎಂದು ಗ್ಯಾರಂಟಿ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಯಡಿಯೂರಪ್ಪ(Yadiyurappa), ಬೊಮ್ಮಯಿ(Bommai), ಅಶೋಕ್‍ಗೆ ಕೇಳ್ತಿದ್ದೀನಿ, ಜೆಡಿಎಸ್‍ನವರಿಗೆ ನಾನು ಕೇಳಲ್ಲ. ಇಂತಹ ಒಂದು ಸಣ್ಣ ಕೆಲಸ ಮಾಡಿದ್ದೀರಾ? ನಿಮ್ಮ ಡಬಲ್ ಇಂಜಿನ್ ಅಧಿಕಾರ ಇತ್ತು. ಈಗ ಬಿಜೆಪಿ-ಜೆಡಿಎಸ್ ಇಬ್ಬರು ಸೇಕೊರ್ಂಡಿದ್ದಾರೆ. ಇಬ್ಬರಲ್ಲ ನಾಲ್ಕು ಜನ ಸೇರ್ಕೊಳಿ. 2028ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮದೇ ಸರ್ಕಾರ ಬರೆದಿಟ್ಕೊಳ್ಳಿ ಎಂದು ಸವಾಲು ಹಾಕಿದ್ದಾರೆ. ಕುಮಾರಸ್ವಾಮಿ ಸುಪುತ್ರ, ಬೊಮ್ಮಾಯಿ ಸುಪುತ್ರ ಬೈ ಎಲೆಕ್ಷನ್‍ನಲ್ಲಿ ಸ್ಪಧಿಸಿದ್ದರು. ಡಬಲ್ ಇಂಜಿನ್ ಸರ್ಕಾರ ಇತ್ತು ಏಕೆ ಗೆಲ್ಲಲು ಆಗಲಿಲ್ಲ? ಚನ್ನಪಟ್ಟಣದಲ್ಲಿ ಏಕೆ ಗೆಲ್ಲುಲು ಆಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.