ಕಲಬುರಗಿಯ ಲಾಡ್ಲೆ ಮಶಾಕ್ ದರ್ಗಾದ (Ladle mashak darga) ಆವರಣದಲ್ಲಿರುವ ಶ್ರೀರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹಿಂದೂಗಳಿಗೆ ಹೈಕೋರ್ಟ್ (Highcourt) ಅವಕಾಶ ನೀಡಿದೆ. ಹೀಗಾಗಿ ಇಂದಿನ ಮಹಾ ಶಿವರಾತ್ರಿಯ (Maha shivaratri) ದಿನದಂದು ಶಿವಲಿಂಕಕ್ಕೆ ವಿಶೇಷ ಪೂಜೆ ಸಲ್ಲಿಸಲು ಶಿವಭಕ್ತರು ಮುಂದಾಗಿದ್ದಾರೆ.

ಹೀಗಾಗಿ ಶಿವಲಿಂಗೆಕ್ಕೆ ವಿಶೇಷ ಪೂಜೆ ಸಲ್ಲಿಸಲು ಹಿಂದೂಪರ ಸಂಘಟನೆಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸದ್ಯ ಕಲಬುರಗಿಯ ಆಳಂದ ಪಟ್ಟಣದಲ್ಲಿ 144 ಅನ್ವಯ ನಿಷೇದಾಜ್ಞೆ ಜಾರಿ ಮಾಡಲಾಗಿದ್ದು, ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಧರ್ಮ ಸೂಕ್ಷ್ಮತೆಯ ಕಾರಣ..ಮುಂಜಾಗ್ರತಾ ಕ್ರಮವಾಗಿ ಆಳಂದ ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಇಂದು ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆಯವರೆಗೆ ಶಿವಲಿಂಗ ಪೂಜೆಗೆ ಅವಕಾಶ ಇದೆ. ಇನ್ನು ಪೂಜೆಗೆ ತೆರಳುವ 15 ಜನರ ಹೆಸರು, ಆಧಾರ ಕಾರ್ಡ್ ಪೊಲೀಸರಿಗೆ ಸಿದ್ರಾಮಯ್ಯ ಹಿರೇಮಠ ನೀಡಲಿದ್ದಾರೆ.