ಬೀದರ್: ಹಾಡುಹಗಲೇ ಬೀದರ್ ತಹಸೀಲ್ದಾರ್ಕಚೇರಿಯ ಶಿರಸ್ತೇದಾರನಿಗೆ ಚಾಕು ಇರಿದ ಘಟನೆ ಇಂದು(ಗುರುವಾರ) ಮಧ್ಯಾಹ್ನ ನಡೆದಿದೆ. ಆಹಾರ ಶಾಖೆಯ ಶಿರಸ್ತೇದಾರ(Shirastedar) ಆಗಿರುವ ಅನಿಲ್ಕುಮಾರ್ ವ್ಯಾಸ್, ಚಾಕು ಇರಿತಕ್ಕೋಳಗಾದವರು. ಕರ್ತವ್ಯದಲ್ಲಿದ್ದ ವೇಳೆಯೇ ಅನೀಲ್ ಕುಮಾರಗೆ ಚಾಕು ಇರಿದು ವ್ಯಕ್ತಿ ಪರಾರಿಯಾಗಿದ್ದಾನೆ. ಕೂಡಲೇ ಗಾಯಾಳು ಅನೀಲ್ ಕುಮಾರ್ ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಎಡಗೈ ಭುಜಕ್ಕೆ ಗಂಭೀರ ಗಾಯವಾದ ಹಿನ್ನೆಲೆ ಬ್ರಿಮ್ಸ್ನ ತೀವ್ರ ನಿಗಾ ಘಟಕದಲ್ಲಿ ಶಸ್ತ್ರ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಬೀದರ್ನ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಚಾಕು ಇರಿದ ಪರಾರಿಯಾದ ವ್ಯಕ್ತಿ ಅಮನ್ ಜುಬೇರ್ ಎಂದು ಗುರುತಿಸಲಾಗಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ಶುರುಮಾಡಿದ್ದಾರೆ.
ಸದನದಲ್ಲಿ ಮುನಿರತ್ನ ಮಾನ ಮರ್ಯಾದೆ ತೆಗೆದ ಕಾಂಗ್ರೆಸ್ ನಾಯಕರು
https://youtu.be/ZbayTPBVQ1U
Read moreDetails