ಮೈಸೂರು : ಜಗದೀಶ್ ಶೆಟ್ಟರ್ ಇಷ್ಟು ದಿನ ಸಜ್ಜನರ ಸಂಘದಲ್ಲಿದ್ದರು, ಈಗ ದುರ್ಜನರ ಸಂಘ ಸೇರಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೈಸೂರಿನ ವರುಣದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಪಕ್ಷಕ್ಕೆ ರಾಜೀನಾಮೆ ನೀಡೋದ್ರಿಂದ ಪಕ್ಷಕ್ಕೆ ಯಾವುದೇ ಸಮಸ್ಯೆ ಆಗೋದಿಲ್ಲ. ಇದು ಕಾರ್ಯಕರ್ತರ ಆಧಾರಿತ ಪಕ್ಷ ಎಂದು ಹೇಳಿದ್ದಾರೆ.
ಬಸವಣ್ಣ ದುರ್ಜನರ ಸಂಘ ಮಾಡಬೇಡಿ ಎಂದು ಹೇಳಿದ್ದಾರೆ. ಇದನ್ನು ಎಲ್ಲರೂ ನೆನಪಿಟ್ಟುಕೊಳ್ಳಿ. ಶೆಟ್ಟರ್ ಬಲಿಪಶು ಆಗುತ್ತಿದ್ದಾರೆ ಎಂಬ ಪದವನ್ನು ನಾನು ಬಳಕೆ ಮಾಡುವುದಿಲ್ಲ. ಶೆಟ್ಟರ್ ಈಗ ಮಾಡಿರುವ ಸಂಘ ಸರಿಯಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ .
ವರುಣ ಕ್ಷೇತ್ರದಲ್ಲಿ ಫೈಟ್ ಬಹಳ ಬಿಗಿಯಾಗಿದೆ.ನಾವು ಕ್ಷೇತ್ರವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ.ಈ ಕಾರಣಕ್ಕೆ ನಾವು ಸೋಮಣ್ಣನಂತಹ ನಾಯಕನನ್ನು ಅಲ್ಲಿ ಕಣಕ್ಕಿಳಿಸಿದ್ದೇವೆ.ರಾಜ್ಯ ಹಾಗೂ ರಾಷ್ಟ್ರ ನಾಯಕರು ಪ್ರಚಾರಕ್ಕೆ ಬರುತ್ತಾರೆ.ಮೋದಿ ಅವರ ಚುನಾವಣಾ ಪ್ರಚಾರದ ದಿನಾಂಕಗಳು ಇನ್ನೂ ನಿಗದಿಯಾಗಿಲ್ಲ. ಬಹುತೇಕ ನಾಮಪತ್ರ ಪ್ರಕ್ರಿಯೆ ಮುಗಿದ ಮೇಲೆ ದಿನಾಂಕಗಳು ನಿರ್ಧಾರವಾಗುತ್ತದೆ ಎಂದು ತಿಳಿಸಿದರು.