
ಕಲಬುರಗಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿ, ಬಜೆಟ್ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮುಖ್ಯಮಂತ್ರಿಗಳು ಮಾನ್ಯತೆ ಕೊಟ್ಟಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆಗೂ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಕಲಬುರಗಿಯಲ್ಲಿ 50 ಕೋಟಿ ವೆಚ್ಚದಲ್ಲಿ ಮಧುಮೇಹ ಆಸ್ಪತ್ರೆ ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ನಾಲ್ಕೈದು ಆಸ್ಪತ್ರೆಗೆ ಅಡಿಗಲ್ಲು ಹಾಕುತ್ತೇವೆ. 92 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಡಿಗಲ್ಲು ಹಾಕಲಾಗುತ್ತದೆ ಎಂದಿದ್ದಾರೆ.
50 ಕೋಟಿ ವೆಚ್ಚದಲ್ಲಿ ಅಲೈಡ್ ಕಾಲೇಜು ನಿರ್ಮಾಣಕ್ಕೆ ಅಡಿಗಲ್ಲು ಹಾಕ್ತಿದ್ದೇವೆ. ಐಟಿಯ ಕಾಲೇಜು ನಿರ್ಮಾಣಕ್ಕೂ ಅಡಿಗಲ್ಲು ಹಾಕಲಿದ್ದೇವೆ. ಕಲ್ಯಾಣ ಕರ್ನಾಟಕ ಎಲ್ಲಾ ಭಾಗದಲ್ಲಿ ಆಸ್ಪತ್ರೆಗಳನ್ನ ಮಾಡ್ತಿದ್ದೇವೆ. ಬೀದರ್ನಲ್ಲಿ ಕ್ಯಾನ್ಸರ್ ಡಿಟೆಕ್ಷನ್ ಸೆಂಟರ್ ಕೂಡ ಮಾಡ್ತಿದ್ದೇವೆ. ರಾಯಚೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡ್ತಿದ್ದೇವೆ. 100 ಕೋಟಿ ವೆಚ್ಚದಲ್ಲಿ ಕೊಪ್ಪಳದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡ್ತಿದ್ದೇವೆ. ಬಳ್ಳಾರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಮಾಡ್ತಿದ್ದೇವೆ. ರಾಯಚೂರು ಗ್ರಾಮೀಣ ಮತ್ತು ಸಿಂಧನೂರಿನಲ್ಲಿ ಜಿಟಿಟಿಸಿ ಸೇಂಟರ್ ಸ್ಥಾಪನೆ ಮಾಡ್ತಿದ್ದೇವೆ ಅನ್ನೋ ಮಾಹಿತಿ ನೀಡಿದ್ದಾರೆ.

ಬಳ್ಳಾರಿಯ ಕಂಪ್ಲಿ ಮತ್ತು ಬಾಗಲಕೋಟೆಯ ಬದಾಮಿಯಲ್ಲೂ ಜಿಟಿಟಿಸಿ ಸೆಂಟರ್ ಸ್ಥಾಪನೆ ಮಾಡ್ತಿದ್ದೇವೆ. ಕಲಬುರಗಿಯ ವಾಗ್ದಾಳಿ – ರಿಬ್ಬನ್ ಪಲ್ಲಿ ರಸ್ತೆಯನ್ನ ಮೇಲ್ದರ್ಜೆಗೆ ಏರಿಸುತ್ತಿದ್ದೇವೆ. ಕಲಬುರಗಿಯಲ್ಲಿ ಮೇಗಾ ಡೈರಿ ಮಾಡ್ತಿದ್ದೇವೆ. ಯಾದಗಿರಿಯಲ್ಲಿ ನರ್ಸಿಂಗ್ ಕಾಲೇಜ್ ಸ್ಥಾಪನೆ ಕೂಡ ಆಗುತ್ತದೆ ಎಂದು ಬಜೆಟ್ ಬಗ್ಗೆ ಕಂಪ್ಲೀಟ್ ಮಾಹಿತಿ ನೀಡಿದ್ದಾರೆ. ಇನ್ನು ಒಂದು ಸಮುದಾಯದ ಪರವಾದ ಬಜೆಟ್ ಎನ್ನುವ ಬಿಜೆಪಿ ನಾಯಕ ಸಿ.ಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ್ದು, ಬಿಜೆಪಿ ಅವರಿಗೆ ಮಾಡೋಕೆ ಕೆಲಸ ಇಲ್ಲ ಎಂದು ಕಲಬುರಗಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ: ಶರಣಪ್ರಕಾಶ ಪಾಟೀಲ್ ವಾಗ್ದಾಳಿ ಮಾಡಿದ್ದಾರೆ.

ಮೈನಾರಿಟಿ ಅಂದ್ರೆ ಮುಸ್ಲಿಮರು ಒಬ್ಬರೇ ಅಲ್ಲ, ಜೈನ್, ಕ್ರಿಶ್ಚಿಯನ್ ಸೇರಿದಂತೆ ಹಲವರು ಬರುತ್ತಾರೆ. ಬಜೆಟ್ ಅಪ್ರೀಷೇಯೇಷನ್ ಮಾಡುವ ವಿವೇಕ ಬಿಜೆಪಿ ಅವರಿಗೆ ಇಲ್ಲ. ಬಜೆಟ್ನಲ್ಲಿ ಎಲ್ಲಾ ಸಮುದಾಯದವರಿಗೆ ಮಾನ್ಯತೆ ನೀಡಲಾಗಿದೆ. ಬಿಜೆಪಿ ಅವರದ್ದು ರಾಜಕೀಯ ದುರುದ್ದೇಶ ಹೇಳಿಕೆ. ಯಾರಿಗೆ ಬಜೆಟ್ ಅರ್ಥ ಆಗಲ್ಲವೋ ಅವರು ಇಂತಹ ಮಾತು ಹೇಳ್ತಾರೆ. ತಮ್ಮ ರಾಜಕೀಯ ಬೇಳೆ ಬೆಳೆಸಿಕೊಳ್ಳಲು ಬಿಜೆಪಿ ಅವರು ಬಜೆಟ್ ಬಗ್ಗೆ ಈ ರೀತಿ ಹೇಳ್ತಿದ್ದಾರೆ ಎಂದು ಬಿಜೆಪಿ ನಾಯಕರ ಟೀಕೆ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.