ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ವಿರೋಧ ಪಕ್ಷಗಳು ದೆಹಲಿಯ ಕಾನ್ಸಿಟಿಟ್ಯೂಷನ್ ಹೌಸ್ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ರಾಷ್ಟ್ರಪತಿ ಅಭ್ಯರ್ಥಿಯಾಗಲು ನಿರಾಕರಿಸಿದ್ದಾರೆ ಮತ್ತು ಬಂಗಾಳದ ಮಾಜಿ ರಾಜ್ಯಪಾಲ ಮಹಾತ್ಮ ಗಾಂಧಿ ಮೊಮ್ಮಗ ಗೋಪಾಲ್ ಕೃಷ್ಣ ಗಾಂಧಿ ಹೆಸರನ್ನು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಶರದ್ ನೇತೃತ್ವದಲ್ಲಿ ನಡೆದ ಎನ್ಸಿಪಿ ಆಂತರಿಕ ಸಭೆಯಲ್ಲಿ ಸೋಲು ಯುದ್ದದಲ್ಲಿ ತಮ್ಮಗೆ ಭಾಗಿಯಾಗಲು ಇಷ್ಟವಿಲ್ಲ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಮಮತಾ ಬ್ಯಾನರ್ಜಿ ಕರೆದಿರುವ ವಿರೋಧ ಪಕ್ಷಗಳ ಸಭೆಯಲ್ಲಿ ಶರದ್ ಸ್ಪರ್ಧಿಸದಿರುವುದು ಅಧಿಕೃತವಾಗಿದೆ.

ನಿನ್ನೆ ಸಂಜೆ ಇದೇ ವಿಚಾರವಾಗಿ ಶರದ್ರನ್ನು ಬೇಟಿ ಮಾಡಿ ಕೆಲಕಾಲ ಚರ್ಚಿಸಿದ ಮಮತಾ ಬುಧವಾರ ಸಭೆ ಆರಂಭವಾದ ಕೂಡಲೇ ಪವಾರ್ ಹೆಸರನ್ನು ಸೂಚಿಸಿದ್ದಾರೆ. ಆದರೆ, ಇದನ್ನು ಸಾರಸಗಟಾಗಿ ನಿರಾಕರಿಸಿದ ಶರದ್ ಬದಲಿಯಾಗಿ ಇನ್ನಿಬ್ಬರ ಹೆಸರನ್ನು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಗಾಳದ ಮಾಜಿ ರಾಜ್ಯಪಾಲರಾದ ಗೋಪಾಲ್ ಕೃಷ್ಣ ಗಾಂಧಿ ಹಾಗು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾರ ಹೆಸರನ್ನು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಜುಲೈ 18ರಂದು ನಡೆಯುವ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಜುಲೈ 21ರಂದು ಫಲಿತಾಂಶ ಪ್ರಕಟವಾಗಲಿದೆ. ಜೂನ್ 21ರಂದು ಒಮ್ಮತದ ಅಭ್ಯರ್ಥಿ ಘೋಷಿಸುವ ಸಲುವಾಗಿ ರಾಷ್ಟ್ರದ ಪ್ರಮುಖ ವಿರೋಧ ಪಕ್ಷಗಳು ಸಭೆ ಸೇರಿವೆ.








