ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿರುವ (Chief Secretary Of Karnataka) ರಜನೀಶ್ ಗೋಯಲ್ (Rajaneesh Goel) ಅವರ ಅಧಿಕಾರ ಈ ತಿಂಗಳು ಅಂತ್ಯವಾಗಲಿದೆ. ಹಾಗಾಗಿ ಅವರ ಸ್ಥಾನಕ್ಕೆ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್ (Shalini Rajaneesh) ಅವರನ್ನ ಆಯ್ಕೆ ಮಾಡಲಾಗಿದೆ. . ಶಾಲಿನಿ ರಜನೀಶ್ ಅವರು ರಜನೀಶ್ ಗೋಯಲ್ ಅವರ ಪತ್ನಿ. ರಾಜ್ಯದಲ್ಲಿ ಈ ಮಹತ್ವದ ಹುದ್ದೆ ಅಲಂಕರಿಸಿದ 2ನೇ ದಂಪತಿ ಎಂಬ ಕೀರ್ತಿಗೆ ರಜನೀಶ್ ದಂಪತಿ ಪಾತ್ರವಾಗಿದೆ.
ರಜನೀಶ್ ಗೋಯಲ್ ಅವರು ಜುಲೈ 31ಕ್ಕೆ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಹಾಗಾಗಿ ಅವರ ಸ್ಥಾನಕ್ಕೆ ಶಾಲಿನಿ ರಜನೀಶ್ ಅವರನ್ನ ಆಯ್ಕೆ ಮಾಡಲಾಗಿ ಎಂದು ಕಾನೂನು ಸಚಿವ ಹೆಚ್ ಕೆ ಪಾಟೀಲ್ (H K Patil) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಜನೀಶ್ ಗೋಯಲ್ ಅವರ ಅಧಿಕಾರದ ಅವಧಿ ಮುಗಿದ ಕಾರಣ ಅವರನ್ನು ಬೀಳ್ಕೊಡಲಾಗುತ್ತದೆ. ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನಾಗಿ ಶಾಲಿನಿ ರಜನೀಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಅಭಿವೃದ್ಧಿ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಶಾಲಿನಿ ಅವರಿಗೆ ಜ್ಯೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಲಾಗಿದೆ. ರಜನೀಶ್ ಗೋಯಲ್ ನಂತರ ಜ್ಯೇಷ್ಠತೆಯ ಮುಖ್ಯ ಕಾರ್ಯದರ್ಶಿ ಹುದ್ದೆಗೇರುವ ರೇಸ್ನಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಜಯ್ ಸೇಠ್(Ajay Seth) ಹಾಗೂ ಶಾಲಿನಿ ರಜನೀಶ್ (Shalini Rajaneesh) ಇಬ್ಬರಿದ್ದರು. ಈಗ ರಾಜ್ಯ ಸರ್ಕಾರವು ಶಾಲಿನಿ ರಜನೀಶ್ ಅವರಿಗೆ ಮಣೆ ಹಾಕಿದೆ. ಸುದೀರ್ಘ ಅವಧಿಗೆ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸಿದರೆ ಆಡಳಿತ ಸುಗಮವಾಗಿ ಸಾಗಲು ನೆರವಾಗಬಹುದು ಎಂಬ ಚಿಂತನೆಯಿದೆ.
ಅಜಯ್ ಸೇಠ್ ಸೀನಿಯರ್ ಆಗಿದ್ದರೂ, ಅವರ ಸೇವಾ ಅವಧಿ 11 ತಿಂಗಳು ಮಾತ್ರ ಇರುವುದರಿಂದ ರಾಜ್ಯ ಸರ್ಕಾರವು ಶಾಲಿನಿ ರಜನೀಶ್ರನ್ನ ನೇಮಕ ಮಾಡಿದೆ. ಇನ್ನೂ ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ 2ನೇ ದಂಪತಿ ಎಂಬ ಖ್ಯಾತಿಗೆ ಶಾಲಿನಿ ರಜನೀಶ್ ಹಾಗೂ ರಜನೀಶ್ ಗೋಯಲ್ ಪಾತ್ರರಾಗಿದ್ದಾರೆ.