ಶಾಲೆ ಆರಂಭಿಸುವ ಕನಸು ಕಂಡಿದ್ದ ಪುನೀತ್ ರಾಜ್ಕುಮಾರ್ ಅವರ ಕನಸು ನನಸು ಮಾಡಲು ಕುಟುಂಬಸ್ಥರು ಮುಂದಾಗಿದ್ದಾರೆ.
ಹೌದು, ಶಾಲೆ ಆರಂಭಿಸುವ ಕನಸು ಕಂಡಿದ್ದ ಪುನೀತ್ ರಾಜ್ಕುಮಾರ್ ಅವರ ಕನಸನ್ನು ಶಿವಣ್ಣನ ಕುಟುಂಬ ಮತ್ತು ಇನ್ಫೋಸಿಸ್ ಪ್ರತಿಷ್ಠಾನ ನನಸು ಮಾಡಿದ್ದು, ಇಂದು ಗುರುವಾರ ನೂತನ ನಿರ್ಮಿಸಿರುವ ಇಂಪೋಸಿಸ್ ಬ್ಲಾಕ್ ಕಟ್ಟಡದ ಲೋಕಾರ್ಪಣೆ ಮಾಡಿ, ‘ಶಕ್ತಿಧಾಮ ವಿದ್ಯಾಶಾಲಾ’ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ನಾಗೇಂದ್ರ, ನಿರಂಜನ್ ಕುಮಾರ್, ನಟ ಶಿವರಾಜಕುಮಾರ್, ಶಕ್ತಿ ಧಾಮದ ಅಧ್ಯಕ್ಷೆ ಗೀತಾ ಶಿವರಾಜ್ ಕುಮಾರ್ ,ಇನ್ಫೋಸಿಸ್ ಪ್ರತಿಷ್ಠಾನದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಷಾಜಿ ಮ್ಯಾಥ್ಯೂ ಉಪಸ್ಥಿತರಿದ್ದರು.