• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಡ್ರಗ್ಸ್ ಕೇಸ್; ಶಾರುಖ್ ಪುತ್ರ ಆರ್ಯನ್ ಮುಸ್ಲಿಂ ಎಂಬ ಕಾರಣಕ್ಕೆ ಟಾರ್ಗೆಟ್ ಮಾಡುತ್ತಿರುವ ಮಾಧ್ಯಮಗಳು.

ನಚಿಕೇತು by ನಚಿಕೇತು
October 6, 2021
in ದೇಶ
0
ಡ್ರಗ್ಸ್ ಕೇಸ್; ಶಾರುಖ್ ಪುತ್ರ ಆರ್ಯನ್ ಮುಸ್ಲಿಂ ಎಂಬ ಕಾರಣಕ್ಕೆ ಟಾರ್ಗೆಟ್ ಮಾಡುತ್ತಿರುವ ಮಾಧ್ಯಮಗಳು.
Share on WhatsAppShare on FacebookShare on Telegram

ಇದೊಂದು ಆಘಾತಕಾರಿ ಘಟನೆ. ಇಡೀ ಬಾಲಿವುಡ್‌ ಅಂಗಳವೇ ಅಲುಗಾಡಿಸಿದ ಹಾಗೆ ಹೊಸದೊಂದು ಡ್ರಗ್ಸ್‌ ಕೇಸ್‌ ಬಟಾ ಬಯಲಾಗಿದೆ. ಈ ಕೇಸಲ್ಲಿ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್ ಖಾನ್‌ ಸಿಕ್ಕಾಕಿಕೊಂಡಿದ್ದಾನೆ. ಆತನನ್ನ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ADVERTISEMENT

ಮುಂಬೈನ ಸಮುದ್ರದ ಮಧ್ಯೆ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಬಾಲಿವುಡ್ ನಟ ಶಾರುಖ್‌ ಖಾನ್ ಪುತ್ರ ಆರ್ಯನ್‌ ಖಾನ್‌ ಸಿಕ್ಕಿ ಬಿದ್ದಿದ್ದಾನೆ. ಸಾಗರದ ಮಧ್ಯೆ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಮಾದಕ ಜಾಲದಲ್ಲಿ ಭಾಗವಹಿಸಿದ್ದ ಕಾರಣ ಆರ್ಯನ್‌ ಖಾನ್‌ನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಸೂಕ್ತ ಮಾಹಿತಿ ಪಡೆದು ಕ್ರೂಸರ್ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ನಶೆಯ ಮತ್ತಿನಲ್ಲಿ ತೂರಾಡುತ್ತಿದ್ದ ಹಲವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಅರೆಸ್ಟ್ ಮಾಡಿದೆ.

ಮುಂಬೈನ ಐಷಾರಾಮಿ ಹಡಗೊಂದರಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿತ್ತು. ಸಮುದ್ರದ ಮಧ್ಯ ಭಾಗದಲ್ಲಿ ಕ್ರೂಸರ್ ಒಳಗೆ ಡ್ರಗ್ಸ್ ಪಾರ್ಟಿ ಆಯೋಜನೆ ಮಾಡಲಾಗಿತ್ತು.  ಈ ನಶೆ ಪಾರ್ಟಿಯ ಮಾಹಿತಿ ಪಡೆದಿದ್ದ ಎನ್‌ಸಿಬಿ ಕ್ರೂಸರ್‌ ಮೇಲೆ ದಾಳಿ ಮಾಡಿತ್ತು. ಈ ರೇಡ್‌ನಲ್ಲಿ ಶಾರುಖ್ ಪುತ್ರ ಸೇರಿ 8 ಮಂದಿ ಎನ್‌ಸಿಬಿ ಬಲೆಗೆ ಬಿದ್ದಿದ್ರು. ಜೊತೆಗೆ ಕೋಕೇನ್, ಹಾಶಿಶ್ ಆಯಿಲ್ ಸೇರಿದಂತೆ ವಿವಿಧ ಮಾದರಿ ಡ್ರಗ್ಸ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ರು. ಬಳಿಕ 7 ಗಂಟೆ ವಿಚಾರಣೆ ನಡೆಸಿದ ಎನ್‌ಸಿಬಿ ಆರ್ಯನ್‌ ಖಾನ್‌ನನ್ನು ಬಂಧಿಸಿದೆ. ಅಲ್ಲದೇ ಪಾರ್ಟಿಯಲ್ಲಿ ಸಿಕ್ಕಿಬಿದ್ದಿದ್ದ 8 ಮಂದಿಯನ್ನ ಎನ್‌ಸಿಬಿ ಬಂಧಿಸಿದೆ.


ಆರ್ಯನ್ ಖಾನ್ ಯಾರು?

ಖ್ಯಾತ ನಟ ಶಾರೂಖ್ ಖಾನ್‌ರ ಮೊದಲನೇ ಪುತ್ರ ಆರ್ಯನ್ ಖಾನ್‌, ನವೆಂಬರ್ 13, 1997ರಲ್ಲಿ ಜನಿಸಿದ್ದಾನೆ. ಶಾರೂಖ್-ಗೌರಿ ಖಾನ್ ಪುತ್ರ ಆರ್ಯನ್ ಸದ್ಯ 23 ವರ್ಷ. 2001ರಲ್ಲಿ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದ ಆರ್ಯನ್, ಕಭೀ ಖುಷಿ, ಕಭೀ ಗಮ್ ಚಿತ್ರದಲ್ಲಿ ನಟಿಸಿದ್ದಾನೆ.


ಸಮುದ್ರ ಮಧ್ಯೆದಲ್ಲಿ ಆಯೋಜಿಸಿದ್ದ ರೇವ್‌ ಪಾರ್ಟಿ ಮೂರು ದಿನಗಳ ಕಾಲ ನಡೆಯುತ್ತಿತ್ತು ಎನ್ನಲಾಗಿದೆ. ಅಲ್ಲದೇ ಹೈಪ್ರೋಫೈಲ್‌ ಗಿರಾಕಿಗಳಿಗೆ ಮಾತ್ರ ಆಹ್ವಾನ ಇತ್ತು. ಜೊತೆಗೆ ಚಲಿಸುವ ಹಡಗಿನಲ್ಲೇ ನಶೆ ಜೊತೆ ಗಾನಬಜಾನ ಜೋರಾಗಿತ್ತು ಎಂದು ತಿಳಿದುಬಂದಿದೆ.


ಹೇಗಿರುತ್ತಿತ್ತು ರೇವ್ ಪಾರ್ಟಿ?
ಅಕ್ಟೋಬರ್ 2ರಿಂದ 4ರವರೆಗೆ ಈ ರೇವ್ ಪಾರ್ಟಿಯನ್ನ ನಡೆಸುವ ಪ್ಲಾನ್ ಇತ್ತು ಎನ್ನಲಾಗಿದೆ. ಅಕ್ಟೋಬರ್ 2ರ ಮಧ್ಯಾಹ್ನ 2 ಗಂಟೆಗೆ  ಮುಂಬೈನಿಂದ ಹಡಗು ತೆರಳಬೇಕಿತ್ತು. ಅಕ್ಟೋಬರ್ 4 ಬೆಳಗ್ಗೆ 10 ಗಂಟೆಗೆ ಹಡಗು ಹಿಂದಿರುಗುವ ರೀತಿ ಪ್ಲಾನ್ ಹಾಕಿಕೊಂಡಿದ್ರು. ಜೊತೆಗೆ  ಚಲಿಸುತ್ತಿರುವ ಹಡಗಿನಲ್ಲೇ ಮ್ಯೂಸಿಕ್ ಜೊತೆ ಮೋಜು ಮಸ್ತಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು ಪಾರ್ಟಿಯಲ್ಲಿ ಭಾಗವಹಿಸಲು 100 ಟಿಕೆಟ್ ಮಾರಾಟವಾಗಿತ್ತಂತೆ. ಜೊತೆಗೆ ಇನ್ನುಳಿದ ಕೆಲವರಿಗೆ ಪಾಸ್ ನೀಡುವ ಮೂಲಕ ಅವಕಾಶವನ್ನೂ ನೀಡಲಾಗಿತ್ತು. ಪಾರ್ಟಿಯಲ್ಲಿ ಭಾಗವಹಿಸಲು ಆಯೋಜಕರಿಂದಲೇ ಪಾಸ್ ವಿತರಣೆ ನಡೆದಿತ್ತು ಅನ್ನೋ ಮಾಹಿತಿ ಬಹಿರಂಗವಾಗಿದೆ. ಜೊತೆಗೆ ಖ್ಯಾತ ಮಾಧ್ಯಮವೊಂದರಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಭಾಗವಹಿಸಲು ನಿರೀಕ್ಷೆಗೂ ಮೀರಿ ಬೇಡಿಕೆ ಇತ್ತೂ ಎಂಬ ಸಂಗತಿಯು ಬಯಲಾಗಿದೆ.


ಸಮುದ್ರದ ಡ್ರಗ್ಸ್ ಪಾರ್ಟಿಗೆ ಶಾರೂಖ್ ಪುತ್ರನೇ ಸ್ಪೆಷಲ್ ಗೆಸ್ಟ್ ಆಗಿದ್ದರಂತೆ. ಪಾರ್ಟಿಯಲ್ಲಿ ಆರ್ಯನ್ ಖಾನ್‌ಗೆ ಉಚಿತ ಎಂಟ್ರಿ ನೀಡಲಾಗಿತ್ತು. ಇನ್ನು ಆರ್ಯನ್ ಬರುತ್ತಾರೆ ಎಂದು ಹಲವಾರು ಮಂದಿ ಪಾರ್ಟಿಯಲ್ಲಿ ಭಾಗವಹಿಸಿದ್ರು ಎನ್ನಲಾಗಿದೆ. ಐಷಾರಾಮಿ ಪಾರ್ಟಿಗೆ ಪ್ರತಿಯೊಬ್ಬರಿಗೂ ಬರೋಬ್ಬರಿ ₹1 ಲಕ್ಷ ಎಂಟ್ರಿ ಫೀಸ್ ಕಡ್ಡಾಯ ಮಾಡಲಾಗಿತ್ತು. ಅಲ್ಲದೇ ಆಯೋಜಕರು ಶಾರೂಖ್ ಪುತ್ರನ ಹೆಸರು ಹೇಳಿ ಭಾರೀ ಲಾಭದ ಲೆಕ್ಕಚಾರ ಮಾಡಿದ್ರು ಅನ್ನೋದು ಸದ್ಯ ಬಹಿರಂಗವಾಗಿದೆ.

ತಮ್ಮ ಪುತ್ರ ನಶೆಯ ಜಾಲದಲ್ಲಿ ಸಿಲುಕಿರೋದು ನಟ ಶಾರುಖ್ ಖಾನ್‌ಗೆ ಬರ ಸಿಡಿಲು ಬಡಿದಂತಾಗಿದೆ. ಅದೇನೆ ಇರಲಿ ಸ್ಟಾರ್‌ ನಟರು, ಸ್ಟಾರ್‌ಗಳ ಮಕ್ಕಳೇ ಈ ಮಾದಕ ಜಾಲದಲ್ಲಿ ಸಿಕ್ಕಿಬೀಳುತ್ತಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವಗನ್, ಅನಿಲ್ ಕಪೂರ್, ಅಕ್ಷಯ್ ಕುಮಾರ್ ಸೇರಿದಂತೆ ಹಲವರ ಮಕ್ಕಳು ಮತ್ತು ಸಂಬಂಧಿಕರು ಡ್ರಗ್ಸ್ ಕೇಸಲ್ಲಿ ಸಿಕ್ಕಿಬಿದ್ದಿದ್ದಾರೆ.


ಶಾರುಖ್ ಪುತ್ರ ಮುಸ್ಲಿಂ ಎಂಬ ಕಾರಣಕ್ಕೆ ಟಾರ್ಗೆಟ್
ಶಾರುಖ್ ಖಾನ್ ಖ್ಯಾತ ಬಾಲಿವುಡ್ ನಟ. ಇವರು ಮೂಲತ ಇಸ್ಲಾಮಿಕ್ ಧರ್ಮಕ್ಕೆ ಸೇರಿದರೂ ಎಲ್ಲಾ ಧರ್ಮೀಯರು ಇವರನ್ನು ಪ್ರೀತಿಸುತ್ತಾರೆ. ಈ ಹಿಂದೆಯೂ ಇವರು ನಾನು ಜ್ಯಾತತೀತ ಎಂದಿದ್ದರು. ನನ್ನ ಹೆಂಡತಿ ಹಿಂದೂ, ನಾನು ಮಸ್ಲಿಂ. ನಾವು ಎಲ್ಲಾ ಧರ್ಮಗಳನ್ನು ಪ್ರೀತಿಸುತ್ತೇವೆ. ಅದಕ್ಕಾಗಿಯೇ ನಾನು ನನ್ನ ಮಗನಿಗೆ ಆರ್ಯನ್ ಖಾನ್ ಎಂದು ಹೆಸರಿಟ್ಟಿದ್ದೇನೆ ಎಂದಿದ್ದರು.

ಇನ್ನು, ಭಾರತದ ಪ್ರತಿಷ್ಠಿತ ಮಾಧ್ಯಮಗಳು ಅಜಯ್ ದೇವಗನ್ ಮತ್ತು ಅನಿಲ್ ಕಪೂರ್ ಮಕ್ಕಳು ಡ್ರಗ್ಸ್ ಕೇಸಲ್ಲಿ ಸಿಕ್ಕಿಬಿದ್ದಾಗ ಯಾವ ಮಾಧ್ಯಮಗಳು ತುಟಿ ಬಿಚ್ಚಿರಲಿಲ್ಲ. ಆದರೀಗ, ಶಾರುಖ್ ಪುತ್ರ ಎಂದ ಕೂಡಲೇ ಬೇಕಂತಲೇ ಟಾರ್ಗೆಟ್ ಮಾಡುತ್ತಿದ್ದಾರೆ. ಶಾರುಖ್‌ ಪುತ್ರ ಮಾಡಿದ್ದು ತಪ್ಪೇ, ಆದರೂ ಹಿಂದುಗಳಿಗೊಂದು ನ್ಯಾಯ, ಮುಸ್ಲಿಮರಿಗೊಂದು ನ್ಯಾಯ ಯಾಕೆ? ಈ ಧೋರಣ ಮೀಡಿಯಾಗಳು ಅಳವಡಿಸುತ್ತಿರೋದು ವಿಪರ್ಯಾಸ ಎಂದು ಹಲವರು ಗಂಭೀರ ಆರೋಪ ಎಸಗಿದ್ದಾರೆ.

Previous Post

PM MITRA – 4,445 ಕೋಟಿ ವೆಚ್ಚದ ಏಳು ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸಂಪುಟ ಅಸ್ತು!

Next Post

ರೈತರ ಮೇಲೆ ಸರ್ಕಾರದ ಆಕ್ರಮಣ ನಡಿತಿದೆ, ಮೋದಿ ಲಖನೌನಲ್ಲಿ ಇದ್ದರೂ ಲಖೀಂಪುರಕ್ಕೆ ಹೋಗಿಲ್ಲ: RahulGandhi

Related Posts

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!
Top Story

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

by ಪ್ರತಿಧ್ವನಿ
April 13, 2026
0

ಬೆಂಗಳೂರು : ಪಕ್ಷದ ಶಾಸಕರು ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಅನವಶ್ಯಕವಾಗಿ ಏನೇನೋ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು" ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ...

Read moreDetails
ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

April 13, 2026
ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

April 13, 2026
ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

April 13, 2026
ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

April 10, 2026
Next Post
ರೈತರ ಮೇಲೆ ಸರ್ಕಾರದ ಆಕ್ರಮಣ ನಡಿತಿದೆ, ಮೋದಿ ಲಖನೌನಲ್ಲಿ ಇದ್ದರೂ ಲಖೀಂಪುರಕ್ಕೆ ಹೋಗಿಲ್ಲ: RahulGandhi

ರೈತರ ಮೇಲೆ ಸರ್ಕಾರದ ಆಕ್ರಮಣ ನಡಿತಿದೆ, ಮೋದಿ ಲಖನೌನಲ್ಲಿ ಇದ್ದರೂ ಲಖೀಂಪುರಕ್ಕೆ ಹೋಗಿಲ್ಲ: RahulGandhi

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada