ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗಿದೆ. ಅಹಮದಾಬಾದ್ ನ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಮಂಗಳವಾರ ಕೋಲ್ಕತ್ತಾ ನೈಟ್ ರೈಡರ್ಸ್ (KKR ) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ನಡುವಿನ ಐಪಿಎಲ್ ಪಂದ್ಯದ ಸಮಯದಲ್ಲಿ ನಟ ಬಿಸಿಲಿನ ಆಘಾತಕ್ಕೆ (Sun Stroke) ಒಳಗಾದ ನಂತರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.ಐಪಿಎಲ್ 2024ರ ಮೊದಲ ಪ್ಲೇಆಫ್ ಪಂದ್ಯದಲ್ಲಿ ಎಸ್ಆರ್ಎಚ್ ವಿರುದ್ಧ ತಮ್ಮ ತಂಡ ಕೆಕೆಆರ್ ಅನ್ನು ಬೆಂಬಲಿಸಲು ಶಾರುಖ್ ಖಾನ್ ಅಹಮದಾಬಾದ್ಗೆ ಬಂದಿದ್ದರು. ಪಂದ್ಯದ ಮುಕ್ತಾಯದ ತನಕ ಅವರು ಮೈದಾನದಲ್ಲಿಯೇ ಇದ್ದರು. ಬಳಿಕ ಅವರು ಮೈದಾನಕ್ಕೆ ಇಳಿದು ಕ್ಯಾಮೆರಾಗಳಿಗೆ ಫೋಸ್ ಕೊಟ್ಟಿದ್ದರು. ಅಭಿಮಾನಿಗಳಿಗೆ ಕೈ ಬೀಸಿ ಶುಭಾಶಯ ಹೇಳಿದ್ದರು.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ರೋಚಕ ಪಂದ್ಯದ ನಂತರ ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್ 2024 ರ ಫೈನಲ್ಗೆ ಪ್ರವೇಶಿಸಿದೆ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ವೇಳೆ ಶಾರುಖ್ ಖಾನ್ ಮತ್ತು ಅವರ ಮಕ್ಕಳಾದ ಅಬ್ರಾಮ್, ಸುಹಾನಾ ಇದ್ದರು. ಜತೆಗೆ ನಟಿ ಅನನ್ಯಾ ಮತ್ತು ಶನಾಯಾ ಕೂಡ ಕಾಣಿಸಿಕೊಂಡಿದ್ದರು.