ಕಳೆದ 5 ದಿನದ ಹಿಂದೆ ‘ಪ್ರತಿಧ್ವನಿ’ ಪ್ರಕಟಿಸಿದ ‘ಒಂದು ಶಾಲೆಯ ಕತೆ-ವ್ಯಥೆ’ ರಾಜ್ಯಾದ್ಯಂತ ವೈರಲ್ ಆಗಿತ್ತು, ಇದನ್ನು ಗಮನಿಸಿದ ಎಸ್ಎಫ್ಐ ರಾಜ್ಯ ಸಮಿತಿ ರಾಯಚೂರು ಜಿಲ್ಲೆಯ ಎಸ್ಎಫ್ಐ ತಂಡಕ್ಕೆ ಸೂಚನೆ ನೀಡಿದ ಪರಿಣಾಮ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಮ್ಯಾಗಲಮನಿ ಮಸ್ಕಿ ತಾಲೂಕಿನ 9 ಹಳ್ಳಿಗಳ ವಿದ್ಯಾರ್ಥಿಗಳನ್ನು ಸೇರಿಸಿ ರಾಯಚೂರು ಡಿ.ಸಿ ಆಫೀಸ್ ಎದುರು ಬುಧವಾರ ದೊಡ್ಡ ಪ್ರತಿಭಟನೆ ನಡೆಸಿದರು. ಇದಕ್ಕೆ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ನಾಗರಡ್ಡೆಪ್ಪ ದೇವರಮನಿ ಮತ್ತು ಇತರರು ಬೆಂಬಲ ನೀಡಿದರು. ಇಲ್ಲಿನ ದಿನಪತ್ರಿಕೆಗಳು ಬುಡ್ದಿನ್ನಿ ಶಾಲೆ ಆರಂಭಕ್ಕೆ ಸರ್ಕಾರ ಅಡ್ಡ ಹಾಕುತ್ತಿರುವುದರ ಕುರಿತು ಬರೆದಿವೆ. ಆದರೆ ಆ ಸುದ್ದಿಗಳು ಸ್ಥಳೀಯ ಪುಟಗಳಿಗೇ ಮೀಸಲಾಗಿದ್ದವು.
ಎಸ್ಎಫ್ ಐ ನೇತೃತ್ವದಲ್ಲಿ ಮಸ್ಕಿ ತಾಲೂಕಿನ ಅಂಕುಶದೊಡ್ಡಿಯ ಗ್ರಾಪಂ ವ್ಯಾಪ್ತಿಯ ಬುದ್ದಿನ್ನಿ ಎಸ್. ಗ್ರಾಮಕ್ಕೆ ಪ್ರೌಢಶಾಲಾ ಮಂಜೂರಿಗಾಗಿ ರಾಯಚೂರಿನ ಬಸವ ಸರ್ಕಲ್ನಿಂದ ಡಿಸಿ ಕಚೇರಿಯವರೆಗೂ ಪ್ರತಿಭಟನಾ ರ್ಯಾಲಿ ನಡೆಸಿ ಡಿಸಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಲಾಯಿತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಮನವಿ ಸ್ವೀಕರಿಸಿ ಪ್ರೌಢ ಶಾಲೆ ಮಂಜೂರಿಗೆ ಇರುವ ತೊಡಕುಗಳನ್ನು ಸರಿಪಡಿಸಲಾಗುವುದೆಂದು ಭರವಸೆ ನೀಡಿದ ನಂತರ ಪ್ರತಿಭಟನಾ ಧರಣಿ ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಜಿಲ್ಲಾ ಕಾರ್ಯದರ್ಶಿ ಲಿಂಗರಾಜ್ ಕಂದಗಲ್, ಬುದ್ದಿನ್ನಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನಾಗರೆಡ್ಡೆಪ್ಪ ದೇವರಮನಿ, ಉಪಾಧ್ಯಕ್ಷ ಹನುಮಂತ ಬುದ್ದಿನ್ನಿ, ಎಸ್ ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ದೀನಸಮುದ್ರ, ಜಿಲ್ಲಾ ಸಮಿತಿ ಸದಸ್ಯರಾದ ಮೌನೇಶ ಬುಳ್ಳಾಪೂರು, ತಿಪ್ಪಣ್ಣ ನಿಲೋಗಲ್, ಎಐಕೆಎಸ್ ನ ಚಂದ್ರಶೇಖರ ಕ್ಯಾತನಹಟ್ಟಿ, ಬಸವರಾಜ ಗುತ್ತೆದಾರ್, ದೇವೇಂದ್ರಪ್ಪ ಕನಸಾವಿ, ಮೌನೇಶ ದೇವರಮನಿ, ಬಾಲಪ್ಪ ಪಾಳೇದ್, ಸಂಗೀತಾ ಸೇರಿದಂತೆ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.
ಮಸ್ಕಿ ಶಾಲೆಯ ಹಿನ್ನೆಲೆ
ನವೆಂಬರ್ 1ರ ರಾಜ್ಯೋತ್ಸವ ಬರುವ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರವೇ ಕನ್ನಡ ಶಾಲೆಗಳನ್ನು ಹೇಗೆ ನಾಶ ಮಾಡುತ್ತಿದೆ ಎಂಬುದರ ಕುರಿತು ಒಂದು ವಿಶೇಷ ವರದಿಯನ್ನು ನಿಮ್ಮ ‘ಪ್ರತಿಧ್ವನಿ’ ನಿಮ್ಮ ಮುಂದೆ ಸಾದರಪಡಿಸುತ್ತಿದೆ.
ಕಳೆದ ವಾರ, ಹೈದರಾಬಾದ್ ಕರ್ನಾಟಕದ ದಯನೀಯ ಸ್ಥಿತಿಗೆ ಯಾರು ಕಾರಣ ಎಂಬ ಬರಹವನ್ನು ಪ್ರತಿಧ್ವನಿ ಪ್ರಕಟಿಸಿತ್ತು. ಅದರಲ್ಲಿ ಹೈದರಾಬಾದ್ ಕರ್ಬಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಶಾಲೆ ನಿರ್ಮಾಣ ಮಾಡಬಹುದಲ್ಲವೇ ಎಂದೂ ಪ್ರಶ್ನೆ ಹಾಕಿತ್ತು.
ಆದರೆ ಈ ಮಂಡಳಿ ಕೆಲವು ಕಡೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದೆ. ಆದರೆ ಶಾಲೆಗಳು ಶುರುವಾಗಿಲ್ಲ. ಇದಕ್ಕೆ ಕಾರಣ ಶಿಕ್ಷಣ ಇಲಾಖೆ ಶಾಲೆಗೆ ಮಂಜೂರಾತಿ ನೀಡಲಾಗದು ಎಂದು ಹೇಳುತ್ತಿದೆ.
ಅಂತಹ ಒಂದು ಕತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಬುಡ್ತಿನ್ನಿ (ಎಸ್) ಗ್ರಾಮದಲ್ಲಿ ಇಲ್ಲಿವರೆಗೆ 8ನೆ ತರಗತಿವರೆಗೆ ಶಾಲೆಯಿತ್ತು. ನಂತರ ಅದನ್ನು ಉನ್ನತೀಕರಿಸಿ 9,. 10ನೇ ಕ್ಲಾಸಿಗೆ ವಿಸ್ತರಿಸಲಾಗಿತು. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯು 1 ಕೋಟಿ 40 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿತು.
ಆದರೆ ಶಾಲೆಗೆ ಇನ್ನೂ ಮಂಜೂರಾತಿ ಸಿಗದ ಕಾರಣ ಬುಡ್ತಿನ್ನಿ ಸೇರಿದಂತೆ ಸುತ್ತಲಿನ 9 ಗ್ರಾಮಗಳ ಮಕ್ಕಳು ಈಗ 9ನೇ ತರಗತಿ ಸೇರಲಾಗದೇ ಅತಂತ್ರರಾಗಿದ್ದಾರೆ. ಈ ಕುರಿತಾಗಿ ಅಲ್ಲಿ ವ್ಯಾಪಕ ಪ್ರತಿಭಟನೆ ನಡೆದಿವೆ. ಇದ್ದುದರಲ್ಲಿ ಸ್ಥಿತಿವಂತರಾದ ಕೆಲವರು 12 ಕಿಮೀ ದೂರದಲ್ಲಿರುವ ಮಸ್ಕಿ ಪಟ್ಟಣಕ್ಕೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ. ಬಸ್ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಅಸಹಾಯಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹಲವು ಬಾಲಕರು ಕೆಲಸ ಅರಸಿ ಬೆಂಗಳೂರಿಗೆ ಗುಳೆ ಹೋಗಿದ್ದಾರೆ.
9 ಗ್ರಾಮಗಳ ಮಕ್ಕಳ ಶೈಕ್ಷಣಿಕ ಬದುಕಿಗೆ ಮಾರಕವಾಗಿದ್ದು ರಾಜ್ಯ ಸರ್ಕಾರದ ಶಿಕ್ಷಣ ನೀತಿ! ಕಟ್ಟಡ ಸಿದ್ಧವಾಗುವವರೆಗೂ ಸುಮ್ಮನಿದ್ದ ಶಿಕ್ಷಣ ಇಲಾಖೆ ಈಗ ತಾಂತ್ರಿಕ ನೆಪ ಒಡ್ಡಿ ಶಿಕ್ಷಣವನ್ನು ನಿರಾಕರಿಸುವ ಮೂಲಕ ಸಂವಿಧಾನ ದ್ರೋಹದ ಕೆಲಸದಲ್ಲಿ ನಿರತವಾಗಿದೆ.
ಜನರ ಒತ್ತಡಕ್ಕೆ ಮಣಿದ ಮಸ್ಕಿ ಶಾಸಕ ಬಸನಗೌಡ ತುರವಿಹಾಳ ಇತ್ತೀಚಿನ ಅಧಿವೇಶನದಲ್ಲಿ ಶಿಕ್ಷಣ ಸಚಿವರಿಗೆ ಈ ಪ್ರಶ್ನೆಯನ್ನು ಕಳಿಸಿದ್ದರು. ಇದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ‘ಅಲ್ಲಿ 9, 10ನೇ ತರಗತಿ ಆರಂಭಿಸಲು ನಿಯಮ ಒಪ್ಪುವುದಿಲ್ಲ’ ಎಂದು ಹೇಳಿದ್ದಾರೆ. ಅವರ ಪ್ರಕಾರ ಕೇಂದ್ರದ ನಿಯಮಂದಂತೆ 5 ಕಿಮೀ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಇದ್ದರೆ ಹೊಸ ಶಾಲೆ ತೆಗೆಯಲು ಅನುಮತಿ ಇಲ್ಲವಂತೆ! 9ನೇ ತರಗತಿಗೆ ಕನಿಷ್ಠ 70 ವಿದ್ಯಾರ್ಥಿಗಳಿದ್ದರೆ ಮಾತ್ರ ಮಂಜೂರಾತಿ ನೀಡನಹುದು ಅಂತೆ! ( ವಿಧಾನಸಭಾ ಕಲಾಪದ ಪ್ರಶ್ನೋತ್ತರ ಕುರಿತ ದಾಖಲೆ ಇದೆ, ಗಮನಿಸಿ)
ಸಮಸ್ಯೆ ಇರುವುದೇ ಇಲ್ಲಿ.ಸರ್ಕಾರಿ ನಿಯಮವೇ ಅವಾಸ್ತವಿಕ. ಇಲ್ಲಿ 5ಕಿಮೀ ಎಂದರೆ ಅದು ಏರಿಯಲ್ ಡಿಸ್ಟೆನ್ಸ್ ಅಂತೆ. ಅಂದರೆ ಮಕ್ಕಳು ವಿಮಾನದಲ್ಲಿ ಶಾಲೆಗೆ ಹೋಗುತ್ತಾರೆಯೇ? ಇದು ಒಂದು ಮೂರ್ಖತನದ ನಿಯಮಾವಳಿ.ಈಗ ಬುಡ್ತಿನ್ನಿ ಶಾಲೆಯಲ್ಲಿ 8ನೇ ತರಗತಿ ಪಾಸಾಗಿಬಂದ 30 ಮಕ್ಕಳಿದ್ದರೆ, ಸಮೀಪದ ಇನ್ನೊಂದು ಶಾಲೆಯಲ್ಲಿ 8ನೇ ತರಗತಿಪಾಸಾಗಿ 50ಕ್ಕೂ ಹೆಚ್ಚು ಮಕ್ಕಳಿದ್ದಾರೆ.ಈ ಮಕ್ಕಳೂ ಬುಡ್ತಿನ್ನಿ ಶಾಲೆಗೆ ಸೇರ ಬಯಸಿದವರು .ಹೀಗಾಗಿ ಸರ್ಕಾರದ ಮಾನದಂಡ 70ರ ಗಡಿಯನ್ನುದಾಟಿ ಮಕ್ಕಳ ಸಂಖ್ಯೆಯಿದೆ.
ಅಷ್ಟಕ್ಕೂ ಎಷ್ಟೇ ಮಕ್ಕಳಿರಲಿ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ತಾಂತ್ರಿಕ ನೆಪಒಡ್ಡಿ ಮಕ್ಕಳನ್ನುಅತಂತ್ರಗೊಳಿಸುವ ಕೆಲಸಗಳು ನಡೆದೇಇವೆ. ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿಇದೆಯಾದರೂ, ರಾಜ್ಯ ಸರ್ಕಾರಗಳಿಗೆ ಇದರೆಲ್ಲಿ ಪರಮಾಧಿಕಾರವಿದೆ.ಆದರೆ ಪ್ರಸ್ತುತ ಸರ್ಕಾರದ ಹೊಣೆಗೇಡಿತನದಿಂದಾಗಿ ದುರ್ಬಲವರ್ಗಗಳ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸ್ವತಃ ವಿಪಕ್ಷ ನಾಯಕ ಸಿದ್ದರಾಮಯ್ಯ ಶಿಕ್ಷಣ ಸಚಿವ ನಾಗೇಶ್ ಅವರಿಗೆ 9, 10ನೇ ತರಗತಿ ಕೂಡಲೇ ಆರಂಭಿಸಲು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಕಲಾಪದಲ್ಲಿ ನಡೆದ ಪ್ರಶ್ನೋತ್ತರ ವಿವರ ಮತ್ತು ಸ್ಥಳೀಯ ಬೇಡಿಕೆಯ ಕುರಿತ ದಾಖಲೆಗಳನ್ನು ‘ಪ್ರತಿಧ್ವನಿ’ ಹಲವು ಶಿಕ್ಷಣ ತಜ್ಞರಿಗೆ ಕಳಿಸಿ ಅಭಿಪ್ರಾಯಕೇಳಿತು.
ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ಅವರಂತೂ ಆಕ್ರೋಶದಿಂದಲೇ, ‘ ಇದು ಶಿಕ್ಷಣದ ನಿರಾಕರಣೆ. ಕೋವಿಡ್ ಅವಧಿಯಲ್ಲೇ ಸಾಕಷ್ಟು ಮಕ್ಕಳು ಶಿಕ್ಷಣದಿಂದ ದೂರವಾದರು.ಆದರೆ ಈಗ ಸರ್ಕಾರವೇ ಕಟ್ಟಿಸಿದ ಶಾಲೆಯಲ್ಲಿ ತರಗತಿಗಳಿಗೆ ಅವಕಾಶ ಇಲ್ಲವೆಂದರೆ ಹೇಗೆ?ಏರಿಯಲ್ ಡಿಸ್ಟ್ನ್ಸ್ ಎಂಬುದೇಅವೈಜ್ಞಾನಿಕ. ರಸ್ತೆಮಾರ್ಗ ಅದರಲ್ಲೂ ಹಳ್ಳ, ದಿಬ್ಬಇರುವದಾರಿಯನ್ನು ಸವೆಸಿ ಮಕ್ಕಳು 10 ಕಿಮೀನಡೆಯಬೇಕೆ?ಸರ್ಕಾರ ಕೂಡಲೇ ತನ್ನನಿರ್ಧಾರ ಬದಲಿಸಿ 9, 10 ನೇ ತರಗತಿಗೆ ಅವಕಾಶ ನೀಡಬೇಕು.ಇಲ್ಲದಿದ್ದರೆ ದಲಿತರು ಮತ್ತು ಹಿಂದುಳಿದ ವರ್ಗಗಳ ಮಕ್ಕಳು ಶಿಕ್ಷಣದಿಂದ ಖಾಯಂ ವಂಚಿತರಾಗುತ್ತಾರೆ.ಅದರೆಲ್ಲೂ ಬಾಲಕಿಯರ ಶೈಕ್ಷಣಿಕ ಜೀವನವೇ ಅಂತ್ಯವಾಗುತ್ತದೆ’ ಎಂದರು.
ಇನ್ನೊಬ್ಬ ಶಿಕ್ಷಣ ತಜ್ಞ ಶ್ರೀಪಾದಭಟ್ ಅವರು, ‘ ಅಲ್ಲರೀ, ಪಟ್ಟಣಗಳಲ್ಲಿ 2-3 ಕಿಮೀದೂರದಲ್ಲಿಒಂದೊಂದುಶಾಲೆಇರುವಾಗಗ್ರಾಮಗಳಲ್ಲಿಈನಿಯಮವೇಕೆ? ರಾಜಕೀಯಇಚ್ಛಾಶಕ್ತಿಇರದಸರ್ಕಾರದಬೇಜವಾಬ್ದಾರಿತವಿದು.ಇದೇಸರ್ಕಾರದಸಂಸ್ಥೆಯೊಂದು 1 ಕೋಟಿ 40 ಲಕ್ಷ ಅನುದಾನದಲ್ಲಿ ಕಟ್ಟಡ ನಿರ್ಮಾಣ ಮಾಡಿದರೂ ಅಲ್ಲಿ ತರಗತಿಗಳಿಗೆ ಅವಕಾಶ ಇಲ್ಲವೆಂದರೆಹೇಗೆ? ಆಗ್ರಾಮಗಳ ಜನರ ಪ್ರತಿಭಟನೆಯ ಜೊತೆ ನಾವೆಲ್ಲ ಒಂದಾಗಬೇಕು; ಎಂದರು.
ಬುಡ್ತಿನ್ನಿ ಶಾಲಾ ಅಭಿವೃದ್ಧಿ ಸಮಿತಿ (ಎಸ್ಡಿಎಂಸಿ ) ಅಧ್ಯಕ್ಷ ನಾಗರಡ್ಡೆಪ್ಪ ದೇವರಮನಿ ‘ಪ್ರತಿಧ್ವನಿ’ ಜೊತೆ ಮಾತನಾಡಿ, ‘ ನಮ್ಮ ಗ್ರಾಮಗಳ ಮಕ್ಕಳು ಕೋವಿಡ್ ನಂತರದ ಅವಧಿಯಲ್ಲಿ ಮತ್ತೆ ಶಾಲೆ ಸೇರಲು ಉತ್ಸುಕರಾದ ಸಂದರ್ಭದಲ್ಲಿ ಸರ್ಕಾರ ವಂಚನೆಮಾಡುತ್ತಿದೆ. ಹೋರಾಟ ನಡೆಸಿ ಶಾಲಾ ಕಟ್ಟಡಕ್ಕೆ ಹೈ-ಕಮಂಡಳಿಯಿಂದ 1 ಕೋಟಿ 40 ಲಕ್ಷ ರೂ ಬಿಡುಗಡೆ ಮಾಡಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಈಗ ತರಗತಿಗೆ ಮಂಜೂರಾತಿ ಇಲ್ಲವೆಂದರೆ ಹೇಗೆ?’ ಎಂದು ಕಿಡಿಕಾರಿದರು.
ಶಾಲೆಯ ಮುಖ್ಯೋಪಾಧ್ಯಾಯ ದುರ್ಗಣ್ಣವರ್ ಕೂಡ ಪ್ರತಿಧ್ವನಿಗೆ ಪ್ರತಿಕ್ರಿಯೆ ನೀಡಿ, , ‘ತುಂಬನೋವಾಗುತ್ತಿದೆ. ನಮ್ಮಬಳಿ 8ನೆತರಗತಿವರೆಗೆ ಓದಿದ ಮಕ್ಕಳು ಈಗ ಅತಂತ್ರರಾಗುತ್ತಿದ್ದಾರೆ.ಸರ್ಕಾರ ಕೂಡಲೇ ತಪ್ಪನ್ನು ತಿದ್ದಿಕೊಳ್ಳಬೇಕು’ ಎಂದರು.
ಹಲವಾರು ಬಾಲಕರು ಶಿಕ್ಷಣದ ಸಹವಾಸವೇ ಬೇಡ ಎಂದು ಬೆಂಗಳೂರಿಗೆ ದುಡಿಯಲು ಹೋಗಿದ್ದಾರೆ. ಹಾಗೂ ಹೀಗೂ ಕಷ್ಟಪಟ್ಟು ಅದರಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ‘ಪ್ರತಿಧ್ವನಿ’ ಸಂಪರ್ಕಿಸಿತು. ಬೆಣಚಿಮರಡಿ ಗ್ರಾಮದ ಕಿರಣಕುಮಾರ್ ಮತ್ತುಬುಡ್ತಿನ್ನಿಗ್ರಾಮದ ರಾಜೇಸಾಬ್ ‘ಪ್ರತಿಧ್ವನಿ’ ಜೊತೆ ಮಾತನಾಡುತ್ತಅಳಲುಆರಂಭಿಸಿದರು.“ ಸರ್ ಕಲಿಯುವಆಶೆತುಂಬಇದೆ. 12-15 ಕಿಮೀದೂರದಮಸ್ಕಿಗೆಹೋಗಿನಮ್ಮಂತಹಬಡವರುಓದುವುದುಕಷ್ಟ. ಬಸ್ ವ್ಯವಸ್ಥೆಯೂಸರಿಯಾಗಿಲ್ಲ. ದಿವೂ 39-40 ರೂ ಖರ್ಚು ಮಾಡಿ ಶಾಲೆಗೆ ಹೋಗುವುದು ಅಸಾಧ್ಯ. ಸಾಕಾಗಿ ಹೋಗಿ ಬೆಂಗಳೂರಿಗೆ ಬಂದು ಕಟ್ಟಡ ಕೆಲಸ ಮಾಡುತ್ತಿದ್ದೇವೆ’ ಎಂದು ದುಃಖಭರಿತರಾಗಿ ಹೇಳಿದಾಗ ಪರಿಸ್ಥಿತಿಯ ಗಾಢತೆ ಮನಕಲಕುವಂತಿತ್ತು.
1 ಕೋಟಿ 40 ಲಕ್ಷ ರೂ ವೆಚ್ಚದಲ್ಲಿಒಂದು ಕಟ್ಟಡ ನಿರ್ಮಿಸುವ ಸರ್ಕಾರ ಅಲ್ಲಿ ತರಗತಿಗಳಿಗೆ ಮಂಜೂರಾತಿ ನೀಡುವುದಿಲ್ಲಎಂದರೆ ಏನರ್ಥ?ಈ ರಾಜ್ಯದ ಸಾವಿರಾರು ಕಿರಣಕುಮಾರ್ ಮತ್ತುರಾಜೇಸಾಬ್ ರಂತಹ ಬಾಲಕರಿಗೆ ಸರ್ಕಾರ ನೀಡುವ ಉತ್ತರವಾದರೂ ಏನು? ಇಂತಹ ಕಾರಣಕ್ಕೆ ಶೈಕ್ಷಣಿಕ ಬದುಕಿಗೆ ಅಂತ್ಯ ಹಾಡುತ್ತಿರುವ ಅಸಂಖ್ಯ ಬಾಲಕಿಯರ ಮನದಾಳದ ನೋವು ಈ ಸರ್ಕಾರಕ್ಕೆ ಅರ್ಥವಾಗುವುದು ಕಷ್ಟ. ಇದು ಪುಂಡುಪೋಕರಿಗಳನ್ನು ಸೇರಿಸಿಕೊಂಡು ಯುವನೀತಿ ರೂಪಿಸುವ ಕೆಲಸದಲ್ಲಿ ಮಗ್ನವಾಗಿದೆ.
ಕನ್ನಡ ಪರ ಸಂಘಟನೆಗಳು ಕೂಡಲೇ ಈ ಶಾಲೆ ಆರಂಭಕ್ಕಾಗಿ ಬೀದಿಗೆ ಇಳಿಯಲೇಬೇಕು.ಅಲ್ಲಿ ದಿನವೂ ಹೋರಾಡುತ್ತಿರುವ 9 ಗ್ರಾಮಗಳ ಜನರಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಇಲ್ಲದಿದ್ದರೆ ನಾವು ಮತ್ತೊಂದು ರಾಜ್ಯೋತ್ಸವವನ್ನು ಕಾಟಾಚಾರಕ್ಕೆ ಆಚರಿಸಲಿದ್ದೇವೆ ಅಷ್ಟೇ. ಕನ್ನಡದ ಬಡಮಕ್ಕಳಿಗೆ ಶಿಕ್ಷಣದ ಅವಕಾಶವನ್ನುನಿರಾಕರಣೆ ಮಾಡುವುದೆಂದರೆ ಅದು ನಮ್ಮ ಸಮಾಜದ ಅಧೋಗತಿಯ ಪ್ರತೀಕವಷ್ಟೇ.