ದಕ್ಷಿಣ ಭಾರತದ ಮಲಯಾಳಂ (Malayalam) ಚಿತ್ರರಂಗದ ಖ್ಯಾತ ನಿರ್ದೇಶಕ ರಂಜಿತ್ ಬಾಲಕೃಷ್ಣ (Director ranjith balakrishna) ವಿರುದ್ಧ ಮತ್ತೊಂದು ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗಿದೆ. ಈ ಮೂಲಕ ಅವರ ವಿರುದ್ಧ ದಾಖಲಾಗುತ್ತಿರುವ ಎರಡನೇ ಲೈಂಗಿಕ ಕಿರುಕುಳದ ಪ್ರಕರಣ ಇದಾಗಿದೆ.
ನಿರ್ದೇಶಕ ರಂಜಿತ್ ಬಾಲಕೃಷ್ಣ ವತ್ತಿಯೊಬ್ಬರನ್ನು ಐಷಾರಾಮಿ ಹೋಟೆಲ್ಗೆ ಕರೆಸಿ, ವಿವಸ್ತ್ರಗೊಳಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ 31 ವರ್ಷದ ಪುರುಷ ಕಲಾವಿದ ರಂಜಿತ್ ಬಾಲಕೃಷ್ಣನ್ ವಿರುದ್ಧ ದೂರು ನೀಡಿದ್ದಾರೆ.
ಈ ದೂರಿನ ಆಧಾರದ ಮೇಲೆ ಬೆಂಗಳೂರಿನ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ (Bangalore airport road police station) ಪ್ರಕರಣ ದಾಖಲಾಗಿದೆ. ನ್ಯಾಯಧೀಶೆ ಹೇಮಾ ಸಮಿತಿ ವರದಿ ಬಿಡುಗಡೆಯಾದ ನಂತರ ರಂಜಿತ್ ಬಂಗಾಳಿ ನಟಿಯೊಬ್ಬರಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದರು.