
ಗೋವಿಂದಾರಜನಗರ ಠಾಣೆ ಇನ್ಸ್ ಪೆಕ್ಟರ್ ಸುಬ್ರಹ್ಮಣಿಯಿಂದ ಆರೋಪಿ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ನಟಿ ಜೊತೆಗಿನ ಸಂಬಂಧದ ಬಗ್ಗೆ ಅರವಿಂದ್ ಕೆಲವು ವಿಚಾರಗಳನ್ನ ಹೇಳಿಕೊಂಡಿದ್ದಾರೆ.
ವಿಚಾರಣೆ ವೇಳೆ ನಾನು ಆಕೆಗೆ ಸೈಟ್, ಮನೆ ಕೊಡಿಸಿದ್ದೇನೆ. ದುಬಾರಿ ಕಾರನ್ನು ಗಿಫ್ಟ್ ಮಾಡಿದ್ದು ಸುಮಾರ ಮೂರು ಕೋಟಿ ರೂ. ಹಣ ಖರ್ಚು ಮಾಡಿದ್ದೇನೆ. ಆದರೆ ಆಕೆ ನನ್ನ ಬಿಟ್ಟು ಆಕೆ ಬೇರೆ ವ್ಯಕ್ತಿ ಜೊತೆಗೆ ಕಾಣಿಕೊಳ್ಳುತ್ತಿದ್ದಳು ಎಂದು ನಟಿ ಮೇಲೆಯೇ ಅರವಿಂದ್ ಆರೋಪ ಮಾಡುತ್ತಿದ್ದಾರೆ. ಸದ್ಯ ಆರೋಪಿ ಹೇಳಿಕೆಗಳನ್ನೂ ದಾಖಲು ಮಾಡಿಕೊಳ್ಳುತ್ತಿರುವ ಪೊಲೀಸರು, ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಿ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.
ಇನ್ನೂ ಸಂತ್ರಸ್ಥ ನಟಿ ಮತ್ತೊಬ್ಬ ನಟಿ ಮೇಲೆಯೂ ಆರೋಪ ಮಾಡಿದ್ದಾರೆ. ಕಿರುತೆರೆಯ ಹಲವು ಸೀರಿಯಲ್ ನಲ್ಲಿ ನಟಿಸಿರುವ ಆರತಿ ಪಡುಬಿದ್ರಿ ಏರ್ಪೋರ್ಟ್ ನಲ್ಲಿರುವಾಗ ತನ್ನ ಅರಿವಿಗೆ ಬಾರದೆ ತನ್ನ ಫೋಟೋಗಳನ್ನ ತೆಗೆದು ಆರೋಪಿ ಅರವಿಂದ್ ಕಳುಹಿಸಿದ್ದಾಳೆ ಎಂದು ಆರೋಪ ಮಾಡಿದ್ದಾಳೆ. ಆ ಫೋಟೋಗಳನ್ನ ಬಳಸಿ ತನಗೆ ಮಾನಹಾನಿ ಮಾಡಿದ್ದಾಗಿ ಹೇಳಿಕೆ ನೀಡಿದ್ದಾಳೆ.












