ಬಾಗಲಕೋಟೆ ನಗರದ ಯುವಕನೋರ್ವ 76 ದಿನಗಳಲ್ಲಿ ಬರೋಬ್ಬರಿ 13885 ಕಿ.ಮೀ ಸೈಕಲ್ ಯಾತ್ರೆಯ ಮೂಲಕ ಹನ್ನೆರಡೂ ಜ್ಯೋತಿರ್ಲಿಂಗಗಳ ದರ್ಶನ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಹೌದು ಬಾಗಲಕೋಟೆಯ ಲಕ್ಷ್ಮೀ ನಗರದ ನೃತ್ಯಪಟು ಫೃಥ್ವಿರಾಜ ಅಂಬಿಗೇರ ಕಳೆದ 76 ದಿನಗಳ ಹಿಂದೆ ಬಾಗಲಕೋಟೆ ನಗರದಿಂದ ಸೈಕಲ್ ಯಾತ್ರೆ ಆರಂಭಿಸಿದ್ದ,ಮೊದಲು ಮಹರಾಷ್ಟ್ರದ ಭೀಮಾಶಂಕರ,ತ್ರಯಂಬಕೇಶ್ವರ,ಕಾಶೀ ವಿಶ್ವನಾಥ ಸೇರಿ ಹನ್ನೆರಡೂ ಜ್ಯೋತಿರ್ಲಿಂಗಗಳ ದರ್ಶನ ಪಡೆದಿದ್ದಾನೆ.

ಒಂದು ದಿನಕ್ಕೆ ಹಗಲಿನಲ್ಲಿ ಎರಡನೂರು ಕಿ.ಮೀ ಸೈಕಲ್ ಸವಾರಿ ಮಾಡಿ, ರಾತ್ರಿ ಪೆಟ್ರೋಲ್ ಬಂಕ್,ದೇವಸ್ಥಾನಗಳಲ್ಲಿ ವಸತಿ ಮಾಡುತ್ತ ಯಾತ್ರೆ ಪೂರ್ಣಗೊಳಿಸಿದ್ದಾನೆ.
ಇನ್ನು ಯಾತ್ರೆ ಪೂರ್ಣಗೊಳಿಸಿ ಬಾಗಲಕೋಟೆ ನಗರದಕ್ಕೆ ಆಗಮಿಸಿದ ಯುವಕನಿಗೆ ಸ್ವಳೀಯರು ಆರತಿ ಬೆಳಗಿ ಸ್ವಾಗತಿಸಿದರು.

ಯುವಕನ ಈ ಯಶಸ್ವಿ ಯಾತ್ರೆಗೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.