ಆ್ಯಪ್ ವರ್ಕ ಆಗದ ಕಾರಣ ಹೈರಾಣಾದ ಸಿಬ್ಬಂದಿಗಳು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆ, ಸಮೀಕ್ಷೆಗೆ ನಿಯೋಜನೆಗೊಂಡ ಶಿಕ್ಷಕರ ಗೋಳಾಟ ಗದಗ ನಗರದ ತಹಶಿಲ್ದಾರ ಕಚೇರಿ ಆವರಣದಲ್ಲಿ ಸೇರಿರೋ ಸಿಬ್ಬಂದಿಗಳು, UHID ಸ್ಟಿಕರ್ ಸರಿಯಾಗಿ ಹಚ್ಚಿಲ್ಲ, ಲೊಕೇಶನ್ ಬೇರೆ ಕಡೆ ತೋರಿಸ್ತಿದೆ. ಆಸ್ಪತ್ರೆ, ಕಿರಾಣಿ, ಹಿಟ್ಟಿನ ಗಿರಣಿಗಳಿಗೂ UHID ಸ್ಟಿಕರ್ ಹಚ್ಚಿದ್ದಾರೆ.

ಹೀಗಾದ್ರೆ ನಾವು ಹೇಗಂತ ಸರ್ವೇ ಮಾಡ್ಬೇಕು ಅಂತ ಶಿಕ್ಷಕರ ಅಳಲು ಒಂದು ಕಡೆ ಸರ್ವರ್ ಸಮಸ್ಯೆ, ಇನ್ನೊಂದು ಕಡೆ UHID ಸಮಸ್ಯೆ ಅಂತಾ ಆರೋಪ, 15 ದಿನದಲ್ಲಿ ಸಮೀಕ್ಷೆ ಮುಗಿಸಿ ಅಂತಾರೆ , ಹೀಗಾದ್ರೆ ಹೇಗೆ ಸಮೀಕ್ಷೆ ಮಾಡಬೇಕು ಅಂತಿರೋ ಸಿಬ್ಬಂದಿಗಳು.

ಹಬ್ಬ-ಹರಿದಿನಗಳನ್ನ ಬಿಟ್ಟು ಸಮೀಕ್ಷೆಗೆ ಬಂದ್ರೆ ಫಜೀತಿ ಪಾಲಾಗಿದ್ದೇವೆ ಬೆಳಿಗ್ಗೆ 8 ಗಂಟೆಯಿಂದ ಫೀಲ್ಡ್ ನಲ್ಲಿದ್ದೇವೆ ಈ ತನಕ ಸರಿಯಾಗಿ ಒಂದು ಮನೆ ಕೂಡಾ ಸರ್ವೇ ಮಾಡ್ಲಿಕ್ಕೆ ಆಗ್ತಿಲ್ಲ. ನಮಗೆ ಸರಿಯಾದ UHID ಕೊಟ್ಟು, ಸರ್ವರ್ ಸಮಸ್ಯೆ ತಪ್ಪಿಸಿದ್ರೆ ನಾವು ಖುಷಿಯಿಂದ ಕೆಲಸ ಮಾಡ್ತಿವಿ ಆದ್ರೆ ಈ ತನಕ ಸರ್ವರ್ ಹಾಗೂ OTP ಗೊಂದಲದಲ್ಲೆ ಕಾಲ ಕಳೆಯುತ್ತಿರೊ ಸಮೀಕ್ಷೆ ಸಿಬ್ಬಂದಿಗಳು.