ಇಂದು ಪ್ರಧಾನಿ ನರೇಂದ್ರ ಮೋದಿ ಸರಣಿ ಸಭೆಗಳನ್ನು ನಡೆಸಲಿದ್ದಾರೆ.ಇಂದು ಒಟ್ಟು ನಾಲ್ಕು ಸಭೆ ನಡೆಸಲಿರೋ ಮೋದಿ, ಬೆಳಿಗ್ಗೆ 11 ಗಂಟೆಗೆ ಕೇಂದ್ರ ಭದ್ರತಾ ಸಮಿತಿ ಸಭೆ ನಡೆಯಲಿದ್ದು, ಕಳೆದ ಎಂಟು ದಿನದಲ್ಲಿ ಎರಡನೆ ಬಾರಿಗೆ ನಡೆಯುತ್ತಿರೋ ಸಭೆ ಇದಾಗಿದೆ.

ಆ ನಂತರ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆ ನಡೆಯಲಿದ್ದು, ಬಳಿಕ ಆರ್ಥಿಕ ಸಂಪುಟ ಸಮಿತಿ ಸಭೆಯಲಿದೆ.ಅಂತಿಮವಾಗಿ ಕೇಂದ್ರ ಸಚಿವ ಸಂಪುಟ ಸಭೆ ನಡೆಸಲಿರೋ ಪ್ರಧಾನಿ ಮೋದಿ,ಇಂದಿನ ಸಭೆಯ ನಂತರ ಉಗ್ರರ ದಾಳಿಗೆ ಪ್ರತ್ಯುತ್ತರ ನೀಡಲು ನಿರ್ಧಾರ ಕೈಗೊಳ್ಳಲಿದ್ದಾರೆ.
ಈ ಸಭೆಯಲ್ಲಿ ಕೇಂದ್ರದ ಹತ್ತಕ್ಕೂ ಪ್ರಮುಖ ಹಿರಿಯ ಸಚಿವರು ಭಾಗಿಯಾಗಲಿದ್ದಾರೆ.ನಿನ್ನೆಯ ಉನ್ನತ ಮಟ್ಟದ ಸಭೆಯಲ್ಲಿ ಸೇನಾ ಕಾರ್ಯಾಚರಣೆಗೆ ಸಂಪೂರ್ಣ ಪ್ರಧಾನಿ ಮೋದಿ ಪರಮಾಧಿಕಾರ ನೀಡಿದ್ದಾರೆ.ಹೀಗಾಗಿ ಇಂದಿನ ದಭೆಗಳು ಕುತೂಹಲಕ್ಕೆ ಕಾರಣವಾಗಿದೆ.











