ಮಂಡ್ಯ (Mandya): ಹಣಕ್ಕಾಗಿ ಟಿಕೆಟ್ ಮಾರಾಟ ಆಗಿದೆ ಎಂದು ಮಂಡ್ಯ ಲೋಕಸಭಾ (Mandya loksabha) ಕ್ಷೇತ್ರದ ಕಾಂಗ್ರೆಸ್ (congress) ಅಭ್ಯರ್ಥಿ ಸ್ಟಾರ್ ಚಂದ್ರು (star Chandru) ವಿರುದ್ಧ ಸಂಸದೆ ಸುಮಲತಾ ಅಂಬರೀಶ್ (Sumalatha ambreesh) ಆರೋಪ ಮಾಡಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಸುಮಲತಾ ಅಂಬರೀಶ್ ಅವರು ಈ ಆರೋಪ ಮಾಡಿದ್ದಾರೆ.
2024 ರ ಲೋಕಸಭಾ ಚುನಾವಣೆಗೆ (loksabha election) ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಅವರಿಗೆ ಟಿಕೆಟ್ ನೀಡಲಾಗಿದೆ. ಸರ್ಕಾರದ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು, ಹಣಕ್ಕಾಗಿ ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಟಾರ್ ಚಂದ್ರು ಅವರೊಬ್ಬ ಕಾಂಟ್ರಾಕ್ಟರ್. ಮಂಡ್ಯ ಜಿಲ್ಲೆಯವರು ಅಂತಾ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿಲ್ಲ. ಈವರೆಗೂ ರಾಜಕಾರಣದಲ್ಲಿಯೇ ಗುರಿತಿಸಿಕೊಂಡಿರದ ವ್ಯಕ್ತಿ ಸ್ಟಾರ್ ಚಂದ್ರು.
ಮಂಡ್ಯದ ಕಾಂಗ್ರೆಸ್ ಟಿಕೆಟ್ ಬಗ್ಗೆ ನಾನು ಮಾತ್ರ ಅಲ್ಲ, ಇಡೀ ಜಿಲ್ಲೆಯವರೇ ಹೇಳುತ್ತಾರೆ ಎಂದಿದ್ದಾರೆ.
ಮಂಡ್ಯ ಅಂದರೆ ಯಾರೂ ಬೇಕಾದರೂ ಗೆಲ್ಲಬಹುದಾ? ಹಣವೇ ಇಲ್ಲಿ Criteria. ಅವರೊಬ್ಬ ಕಾಂಟ್ರಾಕ್ಟರ್. ಸರ್ಕಾರದಿಂದ 350 ಕೋಟಿ ರೂಪಾಯಿ ಗುತ್ತಿಗೆ ಕೆಲಸ ಅವರಿಗೆ ವಹಿಸಿದ್ದಾರೆ. ಸರ್ಕಾರ ಆಡಳಿತದ ಯಂತ್ರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ.
ಇದು ನಿಯಮ ಉಲ್ಲಂಘನೆ. ಸಂವಿಧಾನದಲ್ಲಿ ಇದು ಇದೆಯೇ? ಎಂದು ಪ್ರಶ್ನಿಸಿದ್ದಾರೆ.
ಅಭ್ಯರ್ಥಿ ಎಂದು ಘೋಷಿಸಿ, ಈಗಾಗಲೇ ಸರ್ಕಾರದ ಕಾರ್ಯಕ್ರಮದ ವೇದಿಕೆಯಲ್ಲಿ ಅವರನ್ನು ಕರೆದು ಕೂರಿಸಿ, ಪ್ರಚಾರ ಮಾಡುತ್ತಿದ್ದಾರೆ ಇದು ಸರಿನಾ ಎಂದಿದ್ದಾರೆ.
#Karnataka #mandya #loksabhaelection #mandyaloksabha #starchandru #sumalathaambreesh #congress