ಇಂದು ಡಿಸಿಎಂ ಶಿವಕುಮಾರ್ (Dcm dk Shivakumar) ದೆಹಲಿ ತಲುಪಿದ್ದು ಅಲ್ಲಿಯೆ ವಾಸ್ತವ್ಯ ಹೂಡಲಿದ್ದಾರೆ.ಕೇಂದ್ರ ಜಲಶಕ್ತಿ ಸಚಿವ ಸಿ. ಆರ್. ಪಾಟೀಲ್ (CR Patil) ರನ್ನ ಇಂದು ಭೇಟಿಯಾಗಲಿರುವ ಡಿಕೆಶಿ ರಾಜ್ಯದ ನೀರಾವರಿ ಯೋಜನೆಗಳ ಕುರಿತಾಗಿ ಡಿಸಿಎಂ ಚರ್ಚೆ ನಡೆಸಲಿದ್ದಾರೆ.

ರಾಜ್ಯದ ಭಧ್ರ ಮೇಲ್ಡಂಡೆ ಯೋಜನೆಗೆ ಕೇಂದ್ರದಿಂದ ನೆರವು, ಮಹದಾಯಿ, ಮೇಕೆದಾಟು, ಕೃಷ್ಣಾ ಮೇಲ್ಡಂಡೆ ಯೋಜನೆಗಳ ಬಗ್ಗೆ ಡಿಕೆ ಪ್ರಸ್ತಾಪ ಮಾಡಲಿದ್ದಾರೆ. ಇದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯವರನ್ನೂ ಡಿಕೆಶಿ ಭೇಟಿಯಾಗಲಿದ್ದಾರೆ.
ರಾಜ್ಯದ ವಿವಿಧ ಭಾಗಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪಕ್ಷದ ಕಚೇರಿಗಳ ಶಂಕುಸ್ಥಾಪನೆಗೆ ಕಾಂಗ್ರೆಸ್ ಪಕ್ಷದ ನಾಯಕರನ್ನ ಡಿಕೆಶಿ ಆಹ್ವಾನಿಸಲಿದ್ದಾರೆ. ಮಾರ್ಚ್ 10ರಂದು ಶಂಕುಸ್ಥಾಪನೆ ನೆರವೇರಿಸುವ ಬಗ್ಗೆ ವರಿಷ್ಠರನ್ನ ಭೇಟಿಯಾಗಿ ಚರ್ಚಿಸಿ, ಆಹ್ವಾನ ನೀಡಲಿದ್ದಾರೆ.

ಆದ್ರೆ ಡಿಕೆ ದೆಹಲಿ ಭೇಟಿ ಈ ವಿಚಾರಗಳಿಗೆ ಮಾತ್ರ ಸೀಮಿತವಾಗಿರದೆ, ಕಾಂಗ್ರೆಸ್ ನ ಕೆಲ ನಾಯಕರು ಮತ್ತು ಸಚಿವರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಬಹಿರಂಗವಾಗಿಯೇ ಡಿಕೆ ವಿರುದ್ಧ ಸಮರ ಸಾರಿದ್ದ ಸಚಿವ ಕೆ.ಎನ್ ರಾಜಣ್ಣ ಮತ್ತು ಇತರರ ವಿರುದ್ಧ ವರಿಷ್ಠರ ಬಳಿ ದೂರು ನೀಡಲು ಮುಂದಾಗಿರುವ ಸಾಧ್ಯತೆಯಿದೆ.
ಆ ಮೂಲಕ ಸಿಎಂ ಆಪ್ತ ಬಣದ ಅಟ್ಯಾಕ್ ಗೆ ಕೌಂಟರ್ ಅಟ್ಯಾಕ್ ನೀಡಲು ಡಿಕೆ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದ್ದು ಈ ಬೆಳವಣಿಗೆ ಕಾಂಗ್ರೆಸ್ ಪಾಳಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.