ರಾಜ್ಯದಲ್ಲಿ ಕರೋನ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಸರ್ಕಾರ ಎಲ್ಲ ವಲಯಗಳನ್ನು ಬಹುತೇಕ ಸಡಿಲಗೊಳಿಸಿದೆ. ಆದರೆ ಶಾಲೆ ತೆರೆಯಲು ಮಾತ್ರ ಸರ್ಕಾರ ಮೀನಾ ಮೇಷ ಎಣಿಸುತ್ತಿದ್ದು ಶಾಲೆಯ ತೆರವು ಕುರಿತು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಇದಕ್ಕೆ ಶಿಕ್ಷಣ ತಜ್ಞ ನಿರಂಜನಾರಾಧ್ಯ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಮದುವೆ ಅವಕಾಶ ಕೊಡ್ತೀರಿ, ಬಾರ್ ಓಪನ್ ಮಾಡಿಸುತ್ತಿರಿ. ಆದರೆ ಶಾಲೆ ಯಾಕೆ ತೆರೆಯುತ್ತಿಲ್ಲ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.
ಈ ಸಂಬಂಧ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಪದಾಧಿಕಾರಿಗಳಾದ ಮೊಯ್ದಿನ್ ಕುಟ್ಟಿ, ಡಿ.ಬಿ.ಕುಪ್ಪಸ್ತ ಮತ್ತು ಶಿಕ್ಷಣ ತಜ್ಞ ನಿರಂಜನಾರಾಧ್ಯ ನಗರದಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿ, ಈಗಾಗಲೇ ತಜ್ಞರ ಸಮಿತಿ ಶಾಲೆ ತೆರೆಯುವಂತೆ ವರದಿ ನೀಡಿದೆ. ನಾವೂ ಶಾಲೆ ಆರಂಭಿಸಿ ಎಂದು ಹೇಳಿದ್ದೇವೆ. ಆದರೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಸುಮ್ಮನಾಗಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಸರಿಯಾಗಿ ಆನ್ ಲೈನ್ ಶಿಕ್ಷಣ ಸಿಕ್ಕಿಲ್ಲ. ಈಗಾಗಲೇ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಲ್ಲದೆ, ಅಪೌಷ್ಟಿಕತೆ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಮಕ್ಕಳ ಕಳ್ಳಸಾಗಣೆ, ಭಿಕ್ಷಾಟನೆ ಇತ್ಯಾದಿ ಸಾಮಾಜಿಕ ಪಿಡುಗುಗಳು ಹೆಚ್ಚಾಗಲು ಸರ್ಕಾರವೇ ದಾರಿ ಮಾಡಿಟ್ಟಂತಾಗುತ್ತದೆ. ಕಲಿಕೆಯ ವಿಧಾನವನ್ನು ಆನ್‌ಲೈನ್ ನಿಂದ ಸಂಪೂರ್ಣಗೊಳಿಸಲು ಸಾಧ್ಯವಾಗದೆ ಇದುದ್ದರಿಂದ ಕಲಿಕಾ ಅಂತರ ಹೆಚ್ಚಾಗಲಿದೆ ಹಾಗೂ ಶೈಕ್ಷಣಿಕ ಅಸಮಾತೋಲನ ಉಂಟಾಗಲಿದೆ. ಮಕ್ಕಳ ಕಲಿಕೆ, ದೈಹಿಕ ಮತ್ತು ಮಾನಸಿಕ ಆರೋಗ್ಯ, ಪೌಷ್ಟಿಕತೆ ಉತ್ತಮಗೊಳಿಸಲು ಭೌತಿಕ ತರಗತಿ ಆರಂಭಿಸಬೇಕು’ ಎಂದು ಆಗ್ರಹಿಸಿದರು.
ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು ವಿದ್ಯಾಗಮ ಅಥವಾ ಯಾವುದೇ ಮಾದರಿಯಲ್ಲಿ ಅದರು ಅನುಸರಿಸಿ ಶಾಲೆ ಪ್ರಾರಂಭಿಸುವ ಅನಿವಾರ್ಯತೆಯಿದೆ ಎಂದು ಶಿಕ್ಷಣ ತಜ್ಞ ವಿವರಿಸುತ್ತಾ ಸಿಎಂ ಈ ಕೂಡಲೇ ಗಮನಹರಿಸಿ ಶಾಲೆ ತೆರೆಯಬೇಕು. ಎಂದು ಒತ್ತಾಯಿಸಿದ್ದಾರೆ. ಶಾಲೆ ಪ್ರಾರಂಭಿಸುವ ವಿಚಾರದಲ್ಲಿ ಸರ್ಕಾರಿ ಶಾಲೆಗಳ ಜೊತೆ ಖಾಸಗಿ ಶಾಲೆಗಳನ್ನ ಪ್ರಾರಂಭಿಸಲು ಖಾಸಗಿ ಶಾಲಾಕಾಲೇಜು ಒಕ್ಕೂಟ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯ ಮಾಡಿದರು.
ಕರೋನದಿಂದ ಶೇ.30ರಷ್ಟು ಮಕ್ಕಳು ಶಿಕ್ಷಣದಿಂದ ವಂಚಿತ:
ಕರೋನದಿಂದ ಶೇ.30ರಷ್ಟು ಮಕ್ಕಳಿಗೆ ಶಿಕ್ಷಣ ದೊರೆತಿಲ್ಲ ಎಂದು ಶಿಕ್ಷಣ ಇಲಾಖೆ ಸರ್ವೆ ಯಿಂದ ಬಹಿರಂಗಗೊಂಡಿದೆ. ಮಕ್ಕಳ ಶಿಕ್ಷಣದ ಕುರಿತು ವಿಶ್ವದ ಯಾವುದೇ ಸಂಶೋಧನೆ ಗಮನಿಸಿ ಶಾಲೆ ತುಂಬ ಮುಖ್ಯ ಎಂಬುದೇ ತಿಳಿಸಿವೆ. ಈಗಾಗಲೇ ಸರ್ಕಾರ ತಜ್ಞರ ವರದಿ ಇದ್ದರೂ ಇದೀಗ ಮತ್ತೊಂದು ಸಮಿತಿ ರಚಿಸಿ ವರದಿ ತರಿಸುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಸರಕಾರ ಉತ್ತರಿಸಬೇಕಿದೆ ಎಂದಿದ್ದಾರೆ.
ಕರೋನ ಮೂರನೇ ಅಲೆ ಮಕ್ಕಳನ್ನು ತೀವ್ರವಾಗಿ ಕಾಡಲಿದೆ ಎನ್ನುವುದು ಅವೈಜ್ಞಾನಿಕ:
ಲ್ಯಾಮ್ಸೆಟ್ ವೈದ್ಯಕೀಯ ಜನರಲ್ ಭಾರದಲ್ಲಿ ಒಂದು ಸಮೀತಿಯನ್ನು ಮಾಡಿದ್ದು, ಮಕ್ಕಳ ವಿಷಯದಲ್ಲಿ ಅವರು ಎಷ್ಟು ಸ್ಪಷ್ಟವಾಗಿ ಅಧ್ಯಯನ ಮಾಡಿ ಹೇಳಿದೆ ಎಂದರೆ, “ಕರೋನ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ” ಎಂಬ ವಿಷಯವನ್ನು ಕೋಟ್ ಮಾಡಿ ಹೇಳಿದ ಶಿಕ್ಷಣ ತಜ್ಞ ನಿರಂಜನಸರಾಧ್ಯ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಎಲ್ಲಾ ಮಕ್ಕಳ ವೈದ್ಯರನ್ನು ಒಗ್ಗೂಡಿಸಿ ಸಂಶೋಧನೆ ಮಾಡಿ ಹೇಳಿದ ಮಾತು ಇದು ಎಂದು ಹೇಳಿದ್ದಾರೆ.
ಭವಿಷ್ಯದ ಕರೋನ ಮೂರನೇ ಅಲೆಯಲ್ಲಿ ದೇಶದಲ್ಲಿನ ಮಕ್ಕಳಿನ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ಊಹಾಪೋಹಗಳು ಇದ್ದವು. ಆದರೆ ಅದು ಸುಳ್ಳು ಸುದ್ದಿಯಾಗಿದೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ತಜ್ಞರ ಸಮಿತಿಯು ಇದನ್ನು ನಿರಾಕರಿಸಿದ್ದು ಮಕ್ಕಳು ವೈರಸ್‌ನಿಂದ ಅಸಮರ್ಪಕವಾಗಿ ಪ್ರಭಾವಿತರಾಗುತ್ತಾರೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೇಳಿದೆ.
ಈ ಎಲ್ಲಾ ವೈಜ್ಞಾನಿಕ ವರದಿಗಳನ್ನು ಪರಿಗಣಿಸಿ ಶೀಘ್ರದಲ್ಲೇ ಶಾಲೆಯನ್ನು ತೆರೆಯುವಂತೆ ಶಿಕ್ಷಣ ತಜ್ಞರ ಸಮೀತಿ ಸರ್ಕಾರವನ್ನು ಒತ್ತಾಯಿಸಿದೆ.






