2016ರ ನವೆಂಬರ್ 8ರ ರಾತ್ರಿ 8:00 ಘಂಟೆ ಸುಮಾರಿಗೆ 500 ರೂಪಾಯಿ ಹಾಗೂ 1,000 ರೂಪಾಯಿ ಮುಖಬೆಲೆಯ ನೋಟುಗಳ ಅಮಾನ್ಯ ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಸೋಮವಾರ ಪ್ರಕಟಿಸಿದೆ.
ನೋಟುಗಳ ಅಮಾನ್ಯೀಕರಣವನ್ನ 4-1ರ ಬಹುಮತದ ತೀರ್ಪಿನೊಂದಿಗೆ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು ಸರ್ಕಾರದ ನಿರ್ಧಾರವನ್ನ ಸುಪ್ರೀಂ ಕೋರ್ಟ್ ಸ್ವಾಗತಿಸಿದೆ.
ನ್ಯಾಯಮೂರ್ತಿ ಎಸ್.ಎ.ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠವು ಈ ತೀರ್ಪನ್ನು ಪ್ರಕಟಿಸಿದ್ದು ಇದು ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರದ ನಡುವೆ ಸಮಾಲೋಚನೆ ನಡೆದಿರುವುದುರಿಂದ ಸರ್ಕಾರದ ನಿರ್ಧಾರ ದೋಷಪೂರಿತವಾಗಿರಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಕಡೆಯದಾಗಿ 2016 ನವೆಂಬರ್ 8ರಂದು ನೋಟುಗಳನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರ ಮಾನ್ಯವಾಗಿದ ಎಂದು ಎಸ್.ಎ.ನಜೀರ್, ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣಿಯನ್ ಹಾಗೂ ಜಸ್ಟಿಸ್ ಬಿ.ವಿ.ನಾಗರತ್ನ ಅವರಿದ್ದ ಸಾಂವಿಧಾನಿಕ ಪೀಟ ಅಭಿಪ್ರಾಯಪಟ್ಟಿದೆ.
ಆದರೆ, ಜಸ್ಟಿಸ್ ನಾಗರತ್ನ ಅವರು ಭಿನ್ನವಾದ ತೀರ್ಪು ನೀಡಿದ್ದರು ತಮ್ಮ ಅಬೀಪ್ರಾಯದ ಪ್ರಕಾರ ಅಧಿಸೂಚನೆ ಮೂಲಕ ನೋಟುಗಳನ್ನು ಅಮಾನ್ಯ ಮಾಡಿದ್ದು ಕಾನೂನು ಬಾಹಿರ ಆದರೆ 2016ರಲ್ಲಿ ಇದ್ದ ಸ್ಥಿತಿಯನ್ನು ಈಗ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.