ರಾಜ್ಯದಲ್ಲಿ ಎಸ್‌ಸಿ ಒಳ ಮೀಸಲಾತಿ (SC reservation) ಫೈನಲ್ ಆಗಿದ್ದು, ನಾಗಮೋಹನ್ ದಾಸ್ ಒಳ ಮೀಸಲಾತಿ ವರದಿಗೆ ರಾಜ್ಯ ಸಚಿವ ಸಂಪುಟ (Cabinet) ಒಪ್ಪಿಗೆ ನೀಡಿದೆ. ಸಿಎಂ ಸಿದ್ದರಾಮಯ್ಯ (Cm Siddaramaiah) ನೇತೃತ್ವದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ, 3 ಗುಂಪುಗಳಾಗಿ ಮೀಸಲಾತಿ ವರ್ಗೀಕರಿಸಲಾಗಿದೆ.

ಈ ಪೈಕಿ ಎಡಗೈಗೆ ಶೇಕಡ 6ರಷ್ಟು, ಬಲಗೈಗೆ ಶೇಕಡ 6ರಷ್ಟು ಹಾಗೂ ಉಳಿದ ಜಾತಿಗಳಿಗೆ ಶೇಕಡ 5ರಷ್ಟು ಮೀಸಲಾತಿ ನೀಡಲು ನಿರ್ಧರಿಸಲಾಗಿದೆ. ನಾಗಮೋಹನ್ ದಾಸ್ ವರದಿ ಕೊಟ್ಟಂತೆಯೇ ಎಡಗೈ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿಗೆ ನೀಡಲು ಒಪ್ಪಿಗೆ ಸೂಚಿಸಿದೆ.

ಇಂದು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ವಿಚಾರ ಮಂಡಿಸಲಿದ್ದಾರೆ. ಎಡಗೈಗೆ ಶೇಕಡ 7ರಷ್ಟು ಮೀಸಲಾತಿ ನೀಡುವಂತೆ ಸಚಿವ ಕೆ.ಹೆಚ್.ಮುನಿಯಪ್ಪ ಆಗ್ರಹಿಸಿದ್ದು, ಕೊಟ್ಟ ಭರವಸೆಯನ್ನು ಸಿಎಂ ಈಡೇರಿಸಿದ್ದಾರೆ ಅಂತ ಮಾಜಿ ಸಚಿವ ಹೆಚ್ .ಆಂಜನೇಯ ಸಂತಸ ವ್ಯಕ್ತಪಡಿಸಿದ್ದಾರೆ.