ಸರ್ಕಾರಿ ಶಾಲೆಗಳು (Government Schools) ದಾಖಲಾತಿ ಕೊರತೆಯಿಂದಾಗಿ ಬಂದ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ (Save Government Schools) , ದಾಖಲಾತಿ ಹೆಚ್ಚಿಸಿ, ಸರ್ಕಾರಿ ಶಾಲೆಗೆ ಗ್ರಾಮಸ್ಥರ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಮಾಡುವ ಉದ್ದೇಶದಿಂದ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ (MLA Darshan Puttannaiah) ಹಾಗೂ ಸ್ಯಾಂಡಲ್ ವುಡ್ ಜನಪ್ರಿಯ ನಟ ಡಾಲಿ ಧನಂಜಯ (Dolly Dhananjay) ನೇತೃತ್ವದಲ್ಲಿ ಶಾಲೆಗಳ ಪ್ರಾರಂಭ ದಿನದಂದು ಹಳ್ಳಿಗಾಡಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಹೂ ವಿತರಿಸಿ, ಸರ್ಕಾರಿ ಶಾಲೆಯಲ್ಲೇ (Government Schools) ಚೆನ್ನಾಗಿ ಓದಿ, ನಮ್ಮ ಸಹಕಾರ ಇರುತ್ತದೆ ಎಂದು ಉತ್ತೇಜನ ನೀಡಿದರು.



ಪಾಂಡವಪುರ (Pandavapura) ತಾಲ್ಲೂಕಿನ ಚಲುವರಸನಕೊಪ್ಪಲು ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಶಾಲಾ ಪ್ರಾರಂಭ ದಿನದ ಅಂಗವಾಗಿ ಗ್ರಾಮಸ್ಥರೇ ಸುಂದರವಾಗಿ ಅಲಂಕಾರ ಮಾಡಲಾಗಿತ್ತು.

ಈ ಶಾಲೆಗೆ ಆಗಮಿಸಿದ ನಟ ಡಾಲಿ ಧನಂಜಯ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಜೊತೆಯಲ್ಲಿ ಶಾಲಾ ಮಕ್ಕಳಿಗೆ ಹೂ ನೀಡಿ, ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿ, ಸಾಧಕರಾಗಿ ಎಂದು ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಮಕ್ಕಳೂ ಸಹ ಬಹಳ ಖುಷಿಯಿಂದ ಶಾಲೆಗೆ ಆಗಮಿಸಿದ ಪ್ರಸಂಗ ನಡೆಯಿತು.