ಸ್ವಾತಂತ್ರ್ಯ ಸೇನಾನಿ ಎನ್ನಲಾದ ಸಾವರ್ಕರ್ ವಿಚಾರದಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿದ್ದು ಕಾಂಗ್ರೆಸ್ ಸಾವರ್ಕರ್ ಅನ್ನು ಹೋರಾಟಗಾರ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ವಾದಿಸಿದರೆ ಇತ್ತ ಅಡಳಿತರೂಢ ಬಿಜೆಪಿ ಪಕ್ಷ ಮೈಸೂರಿನ ಸಾವರ್ಕರ್ ಪ್ರತಿಷ್ಠಾನ ರಥ ಯಾತ್ರೆ ಮೂಲಕ ಕಾಂಗ್ರೆಸ್‍ಗೆ ತಿರುಗೇಟು ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ರಥಯಾತ್ರೆಗೆ ಮಾಜಿ ಸಿಎಂ ಬಿಎಸ್‌ವೈ ಚಾಲನೆ ನೀಡಿದರು.
ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಬಿಎಸ್‌ವೈ, ಅಷ್ಟ ದಿಕ್ಕುಗಳಲ್ಲಿ ವೀರ ಸಾವರ್ಕರ್ ಅವ್ರ ಜೀವನ ಮೌಲ್ಯ, ತ್ಯಾಗವನ್ನ ಪಸರಿಸಲಿ ಎಂದು ಹಾರೈಸುತ್ತೇನೆ ಎಂದರು. ಒಂದೆಡೆ ದೇಶ ವಿಶ್ಚಗುರು ಆಗಲು ದಾಪುಗಾಲು ಹಾಕುತ್ತಿದೆ. ದೇಶದ ಮೌಲ್ಯಗಳಿಗೆ ಮಸಿ ಬಳೆಯುವ ಕೆಲಸ ಆಗುತ್ತಿದೆ. ಸಾವರ್ಕರ್ ಬಗ್ಗೆ ಅಪಪ್ರಚಾರ ಕೂಡ ಆಗುತ್ತಿದೆ ಎಂದು ಹೇಳಿದ್ದಾರೆ.
ಮುಂದುವರೆದು, ಸಾವರ್ಕರ್ ಸಂದೇಶವನ್ನ ಮನೆ ಮನಸ್ಸುಗಳಿಗೆ ತಿಳಿಸಬೇಕು ಎಂದು ವಾಜಪೇಯಿ ಹೇಳಿದ್ದರು. ದೇಶದ ಮೊದ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವ್ರಿಂದ ಸಾವರ್ಕರ್ ಸ್ವಾತಂತ್ರ್ಯ ಯೋಧ ಎಂದು ಬಿರುದು ಪಡೆದಿದ್ದರು.ಶರಣರ ಗುಣವನ್ನ ಮರಣದಲ್ಲಿ ನೋಡಿ ಎಂದು ನಮ್ಮ ಹಿರಿಯರು ಹೇಳಿದ್ದರು. ವೀರ ಸಾವರ್ಕರ್ ಬಗ್ಗೆ ಕನ್ನಡ ನಾಡಿನಲ್ಲಿ ಅಪಪ್ರಜಾರ ತರುತ್ತಿರೋದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.
ಸಾವರ್ಕರ್ ಅಂತಿಮ ಯಾತ್ರೆಯಲ್ಲಿ ಎಲ್ಲಾ ಪಕ್ಷದ ನಾಯಕರು ಭಾಗಿಯಾಗಿದ್ದರು. ಇಡೀ ಮುಂಬೈ ನಗರವೇ ಆಂತಿಮ ಯಾತ್ರೆಗೆ ಸೇರಿತ್ತು. ಸಾವರ್ಕರ್ ಭಾರತ ಮಾತೆಯ ಹೆಮ್ಮಯ ಕುವರ. ಸಾವರ್ಕರ್ ಮಾತು ನಮಗೆ ದಾರಿದೀಪ. ದೇಶಕ್ಕಾಗಿ ತನ್ನ ಪದವಿಯನ್ನೇ ತಿರಸ್ಕರಿಸಿದ ಮೊದಲ ಹೋರಾಟಗಾರ ಎಂದು ಹೇಳಿದರು.
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಸಾವರ್ಕರ್ ರಥ ಯಾತ್ರೆ ಆರಂಭವಾಗಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಈ ರಥ ಯಾತ್ರೆಗೆ ಚಾಲನೆ ನೀಡಿದರು. ಈ ರಥವೂ ಮೈಸೂರಿನ ಅನೇಕ ಭಾಗಗಳಲ್ಲಿ ಸಂಚರಿಸಲಿದೆ. ರಥದಲ್ಲಿ ಸಾವರ್ಕರ್ ಅವರ ಜೀವನ ಚರಿತ್ರೆಯ ಅಂಶಗಳನ್ನು ಮೂಡಿಸಲಿದ್ದು, ಸಾವರ್ಕರ್ ಇತಿಹಾಸವನ್ನು ಜನರಿಗೆ ಮುಟ್ಟಿಸುವ ಉದ್ದೇಶದಿಂದ ಈ ರಥಯಾತ್ರೆ ಆಯೋಜಿಸಲಾಗಿದೆ.