
ಬೆಂಗಳೂರು: 14 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಸತ್ವ ಗ್ರೂಪ್ ನ ಅಶ್ವಿನ್ ಸಂಚೆಟಿ ಅವರನ್ನ ಅವಲಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿರುವ ಬಂಡಾಪುರ ಗ್ರಾಮದಲ್ಲಿ 1976 ರಿಂದ ಖಾಲಿ ಇದ್ದ ಸರ್ವೇ ನಂ 20,21,44/1 ರಲ್ಲಿರುವ 14 ಎಕರೆ ಜಮೀನಿಗೆ 2022ರಿಂದ ವಿವಿಧ ನಕಲಿ ದಾಖಲೆ ಸೃಷ್ಟಿಸಿ ಕೋರ್ಟ್ ಗೆ ಸಲ್ಲಿಸಿ ಕೋರ್ಟ್ ಮುಖಾಂತರ ಖಾತೆ ಮಾಡಿಸಿಕೊಳ್ಳಲಾಗಿತ್ತು.

ಆದರೆ 1978 ರಲ್ಲಿ ಜಮೀನಿನ ಮೂಲ ಮಾಲೀಕರಾದ ಮುದ್ದಪ್ಪರಿಂದ ಕೃಷ್ಣನ್ ಮತ್ತು ರಾಧ ದಂಪತಿ ಈ ಜಮೀನನ್ನ ಖರೀದಿ ಮಾಡಿದ್ದರು. ಬಳಿಕ 1986 ರಲ್ಲಿ ಕೃಷ್ಣನ್ ಮೃತ ಪಟ್ಟಿದ್ದರು.. ದಂಪತಿಗೆ ಮಕ್ಕಳು ಇಲ್ಲದ ಕಾರಣ ಪೌತಿ ಖಾತೆಯಾಗಿ ರಾಧರ ಹೆಸರಿಗೆ ಜಮೀನು ಖಾತೆಯಾಗಿತ್ತು. ಪತಿ ಮೃತರಾದ ನಂತರ ತಮಿಳುನಾಡಿಗೆ ತೆರಳಿದ್ದ ರಾಧರವರು ಕೆಲ ವರ್ಷಗಳ ಬಳಿಕ
ತಮಿಳುನಾಡಿನಿಂದ ಬಂದು ಜಮೀನು ಬಳಿ ನೋಡಿದಾಗ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿರುವುದು ಪತ್ತೆಯಾಗಿದೆ.

ಈ ಬಗ್ಗೆ ಮೂಲ ಮಾಲೀಕರಾದ ರಾಧರವರ ಬಳಿ ಜಿಪಿಎ ಪಡೆದಿರುವ ವೆಂಕಟಪ್ಪರಿಂದ ದೂರು ನೀಡಿದ್ದರು. ಬಳಿಕ
ಈ ಕುರಿತು ಮೂಲ ದಾಖಲೆಗಳನ್ನು ರಿಜಿನಲ್ ಕಮಿಷನರ್ ಸಲ್ಲಿಸಿದ್ದರು. ಸದ್ಯ ದಾಖಲೆ ಪ್ರಕಾರ ಮತ್ತೆ ರಾಧರವರ ಹೆಸರಿಗೆ ಖಾತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಆದರೆ ಸಾವಿರಾರು ಕೋಟಿ ಬೆಲೆ ಬಾಳುವ ಜಮೀನು ಕಬಳಿಕೆ ಆಧರಿಸಿ 15 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎ1 ಆರೋಪಿ ಅಶ್ವಿನ್ ಸಂಚೆಟಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.

