
ಮೈಸೂರಿನ ಉದಯಗಿರಿಯಲ್ಲಿ ಕಳೆದ ವಾರ ಮುಸ್ಲಿಂ ಸಮುದಾಯ ಬೀದಿಗಿಳಿದು ಆಕ್ರೋಶ ಹೊರ ಹಾಕಿತ್ತು. ನಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ಆಗಿದೆ ಅನ್ನೋ ಕಾರಣಕ್ಕೆ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟವನ್ನೂ ಮಾಡಲಾಗಿತ್ತು. ಕೆಲವು ಪೊಲೀಸರೂ ಕೂಡ ಗಾಯಗೊಂದಿದ್ದರು. ಆ ಪ್ರಕರಣಕ್ಕೆ ಕಾರಣೀಕರ್ತ ಅನ್ನೋ ಆರೋಪದ ಮೇಲೆ ಸತೀಶ್ ಎಂಬಾತನನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಕೋರ್ಟ್ ಜಾಮೀನು ನೀಡಿದೆ.
ಸತೀಶ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಒಬ್ಬರ ಶೂರಿಟಿ ಕೊಡಲು ಹೇಳಿದ್ರು ನಾವು ಶ್ಯೂರಿಟಿ ಕೊಟ್ಟಿದ್ದೇವೆ. ಇನ್ನು ಮುಂದೆ ಈ ರೀತಿಯ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಅಂತ ಎಚ್ಚರಿಕೆ ನೀಡಿದೆ. ಅಲ್ಲದೆ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರ್ಟ್ ಹೇಳಿದೆ. ಸತೀಶ್ ಅಲಿಯಾಸ್ ಪಾಂಡುರಂಗ ಪರ ವಕೀಲ ಭಾಸ್ಕರ್ ಹೇಳಿದ್ದಾರೆ.

ಬಿಎನ್‌ಎಸ್ ಕಾಯ್ದೆ ವ್ಯಾಪ್ತಿಯಲ್ಲಿ ಈ ಕೇಸ್ ಬರಲ್ಲ, ಯಾಕಂದ್ರೆ ಯಾವುದೇ ಒಂದು ಧರ್ಮಕ್ಕೆ ಧಕ್ಕೆ ಆದ್ರೆ ಸಂಬಂಧ ಪಟ್ಟ ಧರ್ಮದವರು ದೂರು ನೀಡಬೇಕು. ಆದ್ರೆ ಇದರಲ್ಲಿ ಪೊಲೀಸ್ ಅವ್ರೆ ಸುಮೊಟೋ ಕೇಸ್ ಹಾಕಿದ್ರು. ಆತನೇ ಪೋಸ್ಟ್ ಕ್ರಿಯೇಟ್ ಮಾಡಿದ್ದಾನೆ ಅನ್ನೋದಕ್ಕೆ ಯಾವುದೇ ಸಾಕ್ಷಿ ಇಲ್ಲ. ಯಾವುದೇ ವಸ್ತುಗಳನ್ನು ಕೂಡ ನ್ಯಾಯಾಲಯಕ್ಕೆ ಪೊಲೀಸರು ನೀಡಿಲ್ಲ. ಹಾಗಾಗಿ ಪೊಲೀಸರ ಎಫ್. ಐ.ಆರ್ ನಲ್ಲಿ ಅನೇಕ ದೋಷಗಳು ಇತ್ತು. ಈ ಹಿನ್ನಲೆಯಲ್ಲಿ ಸತೀಶ್ ಅಲಿಯಾಸ್ ಪಾಂಡುರಂಗಗೆ ಜಾಮೀನು ಮಂಜೂರು ಆಗಿದೆ ಎಂದಿದ್ದಾರೆ.
