ಕರಾವಳಿ ಭಾಗದಲ್ಲಿ ಮತ್ತೆ ಸ್ಯಾಟಲೈಟ್ ಫೋನ್‌ಗಳು (Satallite phone) ಆಕ್ಟಿವ್ ಆಗಿವೆ. ಈ ಭಾಗದಲ್ಲಿ ಮತ್ತೆ ಭಯೋತ್ಪಾದಕರು ಸಕ್ರಿಯವಾದ ಶಂಕೆ ವ್ಯಕ್ತವಾಗಿದೆ. ಮುಂಬೈ ಭಯೋತ್ಪಾದಕರ ದಾಳಿಯ (Mumbai terrorist attack) ಬಳಿಕ ದೇಶದಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ನಿಷೇಧಿಸಲಾಗಿದೆ.ಆದ್ರೆ ಇದೀಗ ಮತ್ತೆ ಈ ಭಾಗದಲ್ಲಿ ಈ ಪೋನ್‌ಗಳ ಬಳಕೆ ಶುರುವಾಗಿದೆ.
ಸದ್ಯ ಕಳೆದ 10 ದಿನಗಳಿಂದ ಕುಂದಾಪುರದ ದಟ್ಟಾರಣ್ಯದಲ್ಲಿ ಸ್ಯಾಟಲೈಟ್ ಫೋನ್ ಆಕ್ಟಿವ್ ಆಗಿರುವುದು ಪತ್ತೆಯಾಗಿದೆ. ಅಂಪಾರು ಮತ್ತು ಹೆಮ್ಮಾಡಿ ಕೊಲ್ಲೂರು ರಸ್ತೆಯ ಬಾಳೆಕೆರೆ ಬಳಿ ಲೊಕೇಷನ್ ಟ್ರೇಸ್ ಆಗಿದೆ.
ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಕರಾವಳಿ ಪೋಲಿಸರಿಗೆ ಮಾಹಿತಿ ನೀಡಿದ್ದು, ದೇಶದ ಆಂತರಿಕ ಭದ್ರತೆಯ ವಿಚಾರವಾಗಿದ್ದು ರಾಜ್ಯ ಗುಪ್ತಚರ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದೆ.