ಇಂಗ್ಲೆಂಡ್(England) ವಿರುದ್ಧದ ಟೆಸ್ಟ್ ಸರಣಿಯ(Test Series) ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಮೂಲಕ ಭರವಸೆ ಮೂಡಿಸಿದ್ದ ಯುವ ಆಟಗಾರರಾದ ರಜತ್ ಪಟಿದಾರ್(Rajat Patidar) ಹಾಗೂ ಸರ್ಫರಾಜ್ ಖಾನ್(Sarfaraz Khan) 4ನೇ ಟೆಸ್ಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ರಾಂಚಿಯಲ್ಲಿ ನಡೆಯುತ್ತಿರುವ ಪಂದ್ಯದ 4ನೇ ದಿನದಾಟದಲ್ಲಿ ಇಂಗ್ಲೆಂಡ್ ನೀಡಿರುವ 193 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ಸುಲಭದ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ನಿರ್ಣಾಯಕ ಹಂತದಲ್ಲಿ ರೋಹಿತ್ ಶರ್ಮ, ರವೀಂದ್ರ ಜಡೇಜಾ ಅವರುಗಳ ವಿಕೆಟ್ ಪತನದ ಬಳಿಕ ಕಣಕ್ಕಿಳಿದ ರಜತ್ ಪಟಿದಾರ್ ಹಾಗೂ ಸರ್ಫರಾಜ್ ಖಾನ್ ಅವರುಗಳು ಖಾತೆ ತೆರೆಯುವ ಮೊದಲೇ ವಿಕೆಟ್ ಕೈಚಲ್ಲಿ ನಿರಾಸೆ ಮೂಡಿಸಿದರು.

ಆ ಮೂಲಕ ಸಂಕಷ್ಟದ ಸಂದರ್ಭದಲ್ಲಿ ತಂಡಕ್ಕೆ ನೆರವಾಗಬೇಕಿದ್ದ ಈ ಇಬ್ಬರು ಯಾವುದೇ ರನ್‌ಗಳಿಸದೆ ಔಟಾಗುವ ಮೂಲಕ ತಂಡಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದರು. ಇದೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೂ ಸಹ ಈ ಇಬ್ಬರು ಆಟಗಾರರು ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲವಾಗಿದ್ದರು. 3ನೇ ಟೆಸ್ಟ್‌ನಲ್ಲಿ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದ ಸರ್ಫರಾಜ್, ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ 2ನೇ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದ ರಜತ್ ಪಟಿದಾರ್, ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲವಾಗಿದ್ದು, ಮುಂದಿನ ಟೆಸ್ಟ್‌ನಲ್ಲಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.
#TeamIndia #BCCI #RajatPatidar #SarfarazKhan #England #Ranchi