ಕಳೆದ ಹಲವು ದಿನಗಳಿಂದ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇಷ್ಟಕ್ಕೆ ಬಿಡದ ಸಾರಾ ಮಹೇಶ್ ಇಂದು ಸೆ.21 ಸದನದಲ್ಲೂ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ್ದಾರೆ.
ಹೌದು, ಜೆಡಿಎಸ್ ಶಾಸಕ ಸಾರಾ ಮಹೇಶ್ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯನ್ನು ಸುಮ್ಮನೇ ಬಿಡುವಂತೆ ಕಾಣುತ್ತಿಲ್ಲಇಂದು ಸದನಸಲ್ಲಿ ಮತನಾಡಿದ ಶಾಸಕ ಸಾ ರಾ ಮಹೇಶ್, ವಿಧಾನಸಭೆಯಲ್ಲಿ ಹಕ್ಕು ಚ್ಯುತಿ ವಿಚಾರ ಪ್ರಸ್ತಾಪ ಮಾಡಿ, ಹಿಂದಿನ ಮೈಸೂರು ಜಿಲ್ಲಾಧಿಕಾರಿ ಕ್ರಿಯಾ ಯೋಜನೆಯಲ್ಲಿ ಬ್ಯಾಗ್ ಖರೀದಿ ಮಾಡಿದ್ದಾರೆ. ಮೈಸೂರು ಪುರಸಭೆ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಹಕ್ಕು ಮೊಟಕುಗೊಳಿಸಿ ಜಿಲ್ಲಾಧಿಕಾರಿ ನೇರವಾಗಿ ಖರೀದಿ ಮಾಡಿದ್ದಾರೆ. ಆಗ ಇತರೆ ಸದಸ್ಯರು ಜಿಲ್ಲಾಧಿಕಾರಿ ಹೆಸರು ಹೇಳಿ ಎಂದು ಒತ್ತಾಯಿಸಿದರು. ಅದಕ್ಕೆ ಸಾರಾ ಮಹೇಶ್ ಅವರು, ಅವರ ಹೆಸರು ಹೇಳೋಕೆ ಬೇಜಾರಾಗುತ್ತೆ . ಸಾ ರಾ ಮಹೇಶ್ ಒತ್ತಡ ತಂದು ವರ್ಗಾವಣೆ ಮಾಡಿದ್ದಾರೆ ಅಂತ ನಿರ್ಗಮಿತ ಜಿಲ್ಲಾಧಿಕಾರಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಯಾರದೋ ಕಾಲು ಕಟ್ಟಿ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದಿದ್ರು. ಬಂದು ಮಾಡಿದ್ದೇಲ್ಲ ಅನಾಚಾರದ ಕೆಲಸ. ಮುವತ್ತು ಲಕ್ಷಕ್ಕೆ ಸ್ವಿಮಿಂಗ್ ಫೂಲ್ ಮಾಡಿಸಿಕೊಂಡ್ರು. ಹದಿನೈದು ಲಕ್ಷಕ್ಕೆ ಕಚೇರಿ ನವೀಕರಣ ಮಾಡಿಸಿಕೊಂಡರು ಎಂದು ಐ ಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾರ ಮಹೇಶ್ ಆರೋಪ ಮಾಡಿದ್ದಾರೆ.
ರೋಹಿಣಿ ಸಿಂಧೂರಿಯಿಂದ ಹಕ್ಕುಚ್ಯುತಿ ಎಂಬ ಸಾರಾ ಮಹೇಶ್ ಆರೋಪ ವಿಚಾರಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಉತ್ತರಿಸಿ ಇದರಿಂದ ಶಾಸಕರಿಗೆ ಶಿಷ್ಟಾಚಾರ ಉಲ್ಲಂಘನೆ ಆಗ್ತಿದೆ. ಇದನ್ನ ನಾನು ಒಪ್ಪುತ್ತೇನೆ. ಸಾ.ರಾ ಮಹೇಶ್ ಪ್ರಕರಣದಲ್ಲೂ ಶಿಷ್ಟಾಚಾರ ಉಲ್ಲಂಘನೆ ಆಗಿದೆ. ಆದರೆ ನೀವು ಹೇಳಿದಂತೆ ನಿಮ್ಮ ಹಕ್ಕು ಚ್ಯುತಿ ಏನು ಆಗಿಲ್ಲ. ಯಾವುದೇ ಶಾಸಕರಿಗೆ ಶಿಷ್ಟಾಚಾರ ಉಲ್ಲಂಘನೆ ಆಗದಂತೆ ಸೂಕ್ತ ಆದೇಶ ನೀಡುತ್ತೇವೆ ಎಂದು ಹೇಳಿದ್ದಾರೆ.