ಹಿಂದಿ ಬಿಗ್ ಬಾಸ್ ಸೀಸನ್ 16ರ ವಿನ್ನರ್, ರ್ಯಾಪರ್ ಎಂಸಿ ಸ್ಟಾನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದ್ದಾರೆ. ಕಾಸ್ಟ್ಲಿಯಸ್ಟ್ ಬಟ್ಟೆ ಹಾಗೂ ಶೂ ತೊಟ್ಟು ಎಂಸಿ ಸ್ಟಾನ್ ಯಾವಾಗಲೂ ಕಾಣಿಸಿಕೊಳ್ತಿರ್ತಾರೆ.

ಹಲವು ಸಂದರ್ಶನಗಳಲ್ಲಿ ಅವರ ಡ್ರೆಸ್ ಹಾಗೂ ಅವರು ಧರಿಸುವ ಶೂ ಬೆಲೆಯನ್ನ ಕೇಳಲಾಗಿತ್ತು. ಎಂಸಿ ಸ್ಟಾನ್ ಕೂಡ ಯಾವುದೇ ಮುಚ್ಚುಮರೆ ಇಲ್ಲದೇ ಅವರು ಧರಿಸುವ ಶೂ, ಉಡುಗೆಗಳ ಬೆಲೆ ಹೇಳಿದ್ದರು.

ಎಂಸಿ ಸ್ಟಾನ್ ಬಳಿ ಸಿಕ್ಕಾಪಟ್ಟೆ ಶೂಗಳ ಕಲೆಕ್ಷನ್ ಇವೆ. ಈಗ ಅವರ ಕಲೆಕ್ಷನ್ಗೆ ಹೊಸ ಶೂ ಸೇರ್ಪಡೆ ಆಗಿದೆ. ಇದನ್ನು ಕೊಟ್ಟಿದ್ದು ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ. ಈ ಬಗ್ಗೆ ಖದ್ದು ಎಂಸಿ ಸ್ಟಾನ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ಸ್ಟಾನ್, ಸಾನಿಯಾಗೆ ಧನ್ಯವಾದ ಹೇಳಿದ್ದಾರೆ. ‘ಧನ್ಯವಾದಗಳು ಸಾನಿಯಾ’ ಎಂದು ಬರೆದುಕೊಂಡಿದ್ದಾರೆ..
