ಬಳ್ಳಾರಿಯ ಸಂಡೂರು ವಿಧಾನಸಭಾ ಕ್ಷೇತ್ರದ (Bellary sanduru) ಉಪಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದ್ದು, ಇದೀಗ ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ.
ಈ ಕ್ಷೇತ್ರ ಮೊದಲಿಂದಲೂ ಕಾಂಗ್ರೆಸ್ ನ (Congress) ಭದ್ರಕೋಟೆಯಾಗಿದ್ದು, ಈ ಬಾರಿ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿ ಬಿಜೆಪಿ (BJP) ಮತ್ತು ಕಾಂಗ್ರೆಸ್ ಉಭಯ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಗೆಲ್ಲುವ ಅತಿಯಾದ ಆತ್ಮವಿಶ್ವಾಸದಲ್ಲಿದ್ದಾರೆ.

ಒಂದೆಡೆ ತಮ್ಮ ಭದ್ರಕೋಟೆ ಉಳಿಸಿಕೊಳ್ಳುವ ತವಕದಲ್ಲಿ ಕಾಂಗ್ರೆಸ್ ನಾಯಕರಿದ್ರೆ, ಮತ್ತೊಂದೆಡೆ ಬಿಜೆಪಿ ಮುಖಂಡರು ಈ ಬಾರಿ ಕ್ಷೇತ್ರದಲ್ಲಿ ಕಮಲ ಅರಳಿಸುವ ವಿಶ್ವಾಸದಲ್ಲಿದ್ದಾರೆ.ಜನಾರ್ಧನ ರೆಡ್ಡಿಗೆ (Janardhan reddy) ಹೆಗಲಿಗೆ ಹೈಕಮಾಂಡ್ ಗೆಲುವಿನ ಹೊಣೆ ಹೊರಿಸಿದ್ರು. ಹೀಗಾಗಿ ರೆಡ್ಡಿ ಮ್ಯಾಜಿಕ್ ಏನಾದ್ರೂ ನಡೆಯುತ್ತಾ ಎಂಬ ಕುತೂಹಲವಿದೆ.
ಇನ್ನು ಸೀನಿಯರ್ ಲೀಡರ್ ಗಳಾದ ಸಿಎಂ ಸಿದ್ದರಾಮಯ್ಯ (Cm siddaramaiah) ಮಾಜಿ ಸಿಎಂ ಯಡಿಯೂರಪ್ಪ (BS Yesiyurappa) ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಂಡೂರು ಕ್ಷೇತ್ರದಲ್ಲಿ ಬೀಡು ಬಿಟ್ಟು ಪ್ರಚಾರ ನಡೆಸಿದ್ರು. ಹೀಗಾಗಿ ಸಂಡೂರು ಕ್ಷೇತ್ರ ಉಭಯ ಪಕ್ಷದ ನಾಯಕರಿಗೆ ಪ್ರತಿಷ್ಟೆಯ ಕಣವಾಗಿದೆ. ಎಕ್ಸಿಟ್ ಪೋಲ್ ವರದಿಗಳು ಕಾಂಗ್ರೆಸ್ ಪರವಾಗಿದ್ದು, ಅಂತಿಮವಾಗಿ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ.