ಕರ್ನಾಟಕದಲ್ಲಿ ಇಂದು 2023ರ ವಿಧಾನಸಭೆ ಚುನಾವಣೆ ನಡೆಯಿತು. ರಾಜ್ಯದ ಜನತೆ ತಮ್ಮ ತಮ್ಮ ಕೇತ್ರದಲ್ಲಿ ಮತ ಚಲಾವಣೆ ಮಾಡಿದ್ರು. ಅನೇಕ ರಾಜಕಾರಣಿಗಳು, ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಕೂಡ ವೋಟ್ ಮಾಡಿದ್ದಾರೆ. ಇನ್ನು ಬೆಳಗ್ಗೆಯಷ್ಟೇ ಉಡುಪಿಯಲ್ಲಿ ಮತದಾನ ಮಾಡಿರುವ ನಟ ರಕ್ಷಿತ್ ಶೆಟ್ಟಿ, ಇಂದು ರಾತ್ರಿ ಅಮೆರಿಕಾದ ವಿಮಾನ ಏರಲಿದ್ದಾರೆ.

ಮತದಾನ ಮಾಡುವುದಕ್ಕಾಗಿಯೇ ಕಾಯುತ್ತಿದ್ದ ಅವರು, ಮತದಾನದ ಕರ್ತವ್ಯ ಮುಗಿಸಿ ಇಂದು ಯುಎಸ್.ಎಗೆ ಪಯಣ ಬೆಳೆಸುತ್ತಿದ್ದಾರೆ. ಈ ಮಾಹಿತಿಯನ್ನ ಸ್ವತಃ ರಕ್ಷಿತ್ ಶೆಟ್ಟಿ ಹಂಚಿಕೊಂಡಿದ್ದಾರೆ. 777 ಚಾರ್ಲಿ ನಂತರ ರಕ್ಷಿತ್ ಮತ್ತ್ಯಾವ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿತ್ತು. ಅದಕ್ಕೂ ಅವರು ಉತ್ತರಿಸಿದ್ದಾರೆ. ಇದೀಗ ರಿಚರ್ಡ್ ಆಂಟೋನಿ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಈ ಸಿನಿಮಾದ ಸ್ಕ್ರಿಪ್ಟ್ ಮಾಡಲು ಅವರು ಅಮೆರಿಕಾಗೆ ತೆರಳಲಿದ್ದಾರೆ.