ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಇಂದು ಕರ್ನಾಟಕ ವಿಧಾನಸಭಾ ಚುನಾವಣೆಯ ನಿಮಿತ್ತ ತ್ಯಾಗರಾಜನಗರದ ಶಾರದಾ ಹೊಲಿಗೆ ಕೇಂದ್ರದ ಬೂತ್‌ಗೆ ಬಂದು ವೋಟ್ ಮಾಡಿದ್ರು. ಪತ್ನಿ ಪ್ರೇರಣಾ ಹಾಗೂ ತಂದೆ ತಾಯಿ ಜೊತೆ ಬಂದು ಮತ ಚಲಾಯಿಸಿ ಮಾತನಾಡಿದ ಅವರು, ‘ಮತದಾನ ನಮ್ಮ ಹಕ್ಕು ಹಾಗೂ ನಮ್ಮ ಕರ್ತವ್ಯ ಕೂಡ. ಮತದಾನವನ್ನು ಎಲ್ಲರೂ ಮಾಡಬೇಕು. ಯುವಕರು ಮತದಾನದ ಬಗ್ಗೆ ಹೆಚ್ಚು ಜವಾಬ್ಧಾರಿ ವಹಿಸಿಕೊಳ್ಳಬೇಕು. ಯಾರೂ ಮತದಾನದಿಂದ ತಪ್ಪಿಸಿಕೊಳ್ಳಬಾರದು’ ಅಂತ ಧ್ರುವ ಸರ್ಜಾ ಕರೆ ನೀಡಿದರು.

ಇದೇ ವೇಳೆ ಪದ್ಮನಾಭನಗರ ಮತದಾನ ಕೇಂದ್ರದಲ್ಲಿ ನಡೆದ ಗಲಾಟೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಆಕ್ಷನ್ ಪ್ರಿನ್ಸ್, ‘ಕಿಡಿಗೇಡಿಗಳು ಗಲಾಟೆ ಮಾಡಿದ್ರೆ ಅಂತವರನ್ನು ಸುಮ್ನನೆ ಬಿಡಬಾರದು. ಅದರಲ್ಲೂ ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡಿದ್ರೆ ಅಂಥವರಿಗೆ ಬೂಟ್ ತೆಗೆದುಕೊಂಡು ಹೊಡೆಯಬೇಕು’ ಎಂದು ಆಕ್ರೋಶದಿಂದಲೇ ಮಾತನಾಡಿದ್ರು.
